Recent Posts

Sunday, January 19, 2025
ರಾಜ್ಯಸಂತಾಪಸುದ್ದಿ

ಎರಡು ರೈಲುಗಳ ನಡುವೆ ಡಿಕ್ಕಿ : ಹಳಿ ತಪ್ಪಿದ 12 ಬೋಗಿ –ಕಹಳೆ ನ್ಯೂಸ್

ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 12 ಬೋಗಿಗಳು ಹಳಿ ತಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಾಕುರದ ಓಂಡಾ ರೈಲು ನಿಲ್ದಾಣದಲ್ಲಿ ಇಂದು ಮುಂಜಾನೆ ನಡೆದಿದೆ.

ಒಂದು ಗೂಡ್ಸ್ ರೈಲು ಮತ್ತೊಂದು ಗೂಡ್ಸ್ ರೈಲಿಗೆ ಹಿಂಬದಿಯಿAದ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅವಘಡದಿಂದ ಆದ್ರಾ ವಿಭಾಗದ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಆದ್ರಾ ವಿಭಾಗವು ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಿಗೆ ಸೇವೆ ಸಲ್ಲಿಸುತ್ತದೆ. ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ ಮತ್ತು ಬುರ್ದ್ವಾನ್ ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳಾದ ಧನ್‌ಬಾದ್, ಬೊಕಾರೊ ಮತ್ತು ಸಿಂಗ್‌ಭೂಮ್. ಇದು ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು