Recent Posts

Monday, January 20, 2025
ಸುದ್ದಿ

ತುಟಿ ದಪ್ಪವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋದ ಯುವತಿ : ಆಗಿದ್ದು ಮಹಾ ಎಡವಟ್ಟು..! –ಕಹಳೆ ನ್ಯೂಸ್

ತನ್ನ ತುಟಿ ಇನ್ನು ದೊಡ್ಡದಾಗಿ ಕಾಣಬೇಕು.. ತನ್ನ ಸೌಂದರ್ಯ ಹೆಚ್ಚಬೇಕು ಎಂದು ತುಟಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವತಿಯೊಬ್ಬಳು ಇದೀಗ ಪೇಜಿಗೆ ಸಿಲುಕಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

28 ವರ್ಷದ ಜೆಸ್ಸಿಕಾ ಬುರ್ಕೊ ಎಂಬ ಹೆಸರಿನ ಯುವತಿ ತನ್ನ ತುಟಿಗಳು ದಪ್ಪವಾಗಿ ಹಾಗೂ ಆಕರ್ಷಕವಾಗಿ ಕಾಣಲು ಲಿಪ್ ಫಿಲ್ಲರ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾಳೆ. ಈ ಲಿಪ್ ಫಿಲ್ಲರ್‌ನಲ್ಲಿ ತುಟಿಗಳಿಗೆ ಚುಚ್ಚು ಮದ್ದುಗಳನ್ನು ಚುಚ್ಚುವುದಾಗಿದೆ. ಇದು ಕೃತಕವಾಗಿ ತುಟಿಗಳು ಉಬ್ಬಿದ ಆಕಾರದಲ್ಲಿ ನಿಲ್ಲಲು ಕಾರಣವಾಗುತ್ತದೆ. ಈ ಪ್ರಕ್ರಿಯೆಗೆ ಸಾಕಷ್ಟು ದುಡ್ಡು ಖಚಾಗುತ್ತದೆ. ಆದರೆ ಜೆಸ್ಸಿಕಾ ಉಚಿತವಾಗಿ ಲಿಪ್ ಫಿಲ್ಲರ್ ಶಸ್ತ್ರಚಿಕಿತೆ ಮಾಡಿಸಿಕೊಂಡಿದ್ದು, ಇದೀಗಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಲಿಪ್ ಫಿಲ್ಲರ್‌ನ ನಂತರ ಅವಳ ತುಟಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಸಾಕಷ್ಟು ನೋವನ್ನು ಅನುಭವಿಸಿದ್ದಾಳೆ. ಸಿರಿಂಜ್ ತನ್ನ ರಕ್ತನಾಳವನ್ನು ನೋಯಿಸಿದೆ ಮತ್ತು ತುಟಿಗಳು ಊದಿಕೊಳ್ಳಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವಳ ತುಟಿಗಳು ಸಾಮಾನ್ಯವಾಗಿ ಇದ್ದ ಗಾತ್ರಕ್ಕಿಂತ ಎರಡು ಪಟ್ಟು ಉಬ್ಬಿಕೊಂಡಿದ್ದು, ಈಕೆ ಮುಖದ ಅಂದವನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ.