ಯೋಗಿ ಶಿವನಂದರವರು ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಜಿಲ್ಲಾಸ್ಪತ್ರೆಯಾದ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಾನು ಸಾಯುವಾಗ ತನ್ನ ಮನೆಯಲ್ಲಿಯೆ ಸಾಯಬೇಕೆಂದು ಅವರ ಇಚ್ಚೆಯಾಗಿತ್ತು, ಜಿಲ್ಲಾಸ್ಪತ್ರೆಯಿಂದ ಒಪ್ಪಿಗೆಯಿಂದ ಡಿಸ್ಚಾರ್ಚ್ ಆಗಿ ಮನೆಯಲ್ಲಿಯೆ ದಿನಕಳೆಯುತ್ತಿದ್ದರು ಬೆಳಿಗ್ಗೆ ಸುಮಾರು 5.00 ಗಂಟೆಗೆ ಹೊತ್ತಿಗೆ ಮರಣ ಹೊಂದಿದ್ದು.
ಈ ಮರಣದ ಅಂತಿಮ ಸಂಸ್ಕಾರವನ್ನು ಮಾಡಲು ಸಂಬ0ದಿಕರನ್ನು ಹುಡುಕಿದಾಗ ಯಾರು ಸಂಪರ್ಕಕ್ಕೆ ಇಲ್ಲದೆ ಇರುವುದು ಕಂಡುಬಂದಾಗ ಊರಿನ ಯುವಸ್ಪಂದನ ವಾಮದಪದವು ಘಟಕದ ಸದಸ್ಯರಾದ ದಿನೇಶ್ ದಂಬೆದಾರ್ ರೂಪೇಶ್ ಪಾಲೆದಮರ ಸುದಾಕರ್ ಪಾಲೆದಮರ, ದೇವಿಪ್ರಸಾದ್ ಶೆಟ್ಟಿ ಪಾಲೆದಮರ ಹರೀಶ್ ನಾಯಕ್ ಪರಾರಿ ಸಂತೋಷ್ ಆಚಾರ್ಯ ಮತ್ತು ಮನೀಶ್ ಶೆಟ್ಟಿ ಸಹಕಾರದೋಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.