ಸುಬ್ರಹ್ಮಣ್ಯ: ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತ ನಾಲ್ವರ ತಂಡ ಪೊಲೀಸರಿಗೆ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಳಿ ನಡೆದಿದೆ.
ಮರ್ಧಾಳ ಸಮೀಪದ ಚಾಕೋಟೆಕೆರೆಯಲ್ಲಿರುವ ಮದ್ಯದಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಶಿವಪ್ರಸಾದ್, ಶ್ರಿಶೈಲ, ಗೃಹರಕ್ಷಕ ದಳದ ಸಿಬ್ಬಂದಿ ಯೋಗೀಸ್ ಮಧ್ಯಪಾನ ಮಾಡಿರುವುದನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತರಾಗಿ ಆಗಮಿಸಿದ ನೂಜಿಬಾಳ್ತಿಲ ನಿವಾಸಿಗಳಾದ ರತ್ನಾಕರ, ಹರೀಶ್, ದಿನೇಶ್, ಪ್ರಸಾಂತ್ ಮತ್ತಿತರರು ಪೊಲೀಸರ ಜೊತೆ ವಾಗ್ವಾದ ನಡೆಸಿದಲ್ಲದೆ, ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಪೊಲೀಸ್ ವಾಹನದ ಗಾಜನ್ನು ಪುಡಿಗೈದು ಹಾನಿಹೊಳಿಸಿದ್ದು, ಮದ್ಯಪಾನ ತಪಾಸಣೆಯ ಸಲಕರಣೆಯನ್ನು ಧ್ವಂಸಗೈದಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪುಟ್ಟಸ್ವಾಮಿಯವರ ಹಲ್ಲು ಹಾಗೂ ಶ್ರಿÃಶೈಲರವರ ಹಣೆಗೆ ಏಟಾಗಿದೆ.
ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂದಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಭೇಟಿ ನೀಡಿದ್ದಾರೆ. ಆರೋಪಿಗಳಲ್ಲಿ ರತ್ನಕರ ಹಾಗೂ ಹರೀಶ್ ಎಂಬುವವರು ಸೈನಿಕರಾಗಿದ್ದು, ರಜೆಯಲ್ಲಿ ಊರಿಗೆ ಆಗಮಿಸಿದವರೆನ್ನಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.