Thursday, January 23, 2025
ಸುದ್ದಿ

ಝೀ ವಾಹಿನಿಯ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ಆತ್ಮಿ ಗೌಡ ಪ್ರಥಮ ಸ್ಥಾನ –ಕಹಳೆ ನ್ಯೂಸ್

ಝೀ ಕನ್ನಡ ವಾಹಿನಿ ನಡೆಸುತ್ತಿರುವ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಮತ್ತು ಉಮಾಶ್ರೀ ದಂಪತಿ ಪುತ್ರಿ ಆತ್ಮಿ ಗೌಡ ಪ್ರಥಮ ಸ್ಥಾನ ಪಡೆದು, ರೂ.50,000 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿರುವ, ಛೋಟಾ ಚಾಂಪಿಯನ್ ಶೋ ನಲ್ಲಿ 2ರಿಂದ 6 ವರ್ಷದ ಮಕ್ಕಳು ಭಾಗವಹಿಸುವ ಅವಕಾಶವಿದೆ. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದ ಆತ್ಮಿ ಗೌಡ ಬಳಿಕ 3 ಸುತ್ತಿನ ಆಡಿಷನ್ ನಡೆದು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.

ಗೇಮ್ ಶೋ.ನಲ್ಲಿ ಒಟ್ಟು 5 ಜನ ಸ್ಪರ್ಧಿಗಳು ಭಾಗವಹಿಸಿದ್ದು, ಅದರಲ್ಲಿ ಆತ್ಮಿ ಗೌಡ ಅತ್ಯುತ್ತಮವಾಗಿ ಆಡಿ ವಿಜೇತರಾಗಿದ್ದಾರೆ.