Thursday, January 23, 2025
ಸುದ್ದಿ

ಕಾಳಾವರದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತ್ಯು –ಕಹಳೆ ನ್ಯೂಸ್

ಕುಂದಾಪುರ ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಸತತ ಹುಡುಕಾಟದ ಬಳಿಕ ಮೃತದೇಹ ಇಂದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಳಾವರ ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ (37) ಮೃತ ದುರ್ದೈವಿಯಾಗಿದ್ದಾರೆ. ಮಳೆಯಿದ್ದ ಕಾರಣ ಮೀನು ಶಿಕಾರಿಗಾಗಿ ಹರೀಶ್ ಪೂಜಾರಿ ಹಾಗೂ ಮೂವರು ಸ್ನೇಹಿತರು ಕಾಳಾವಾರ ದೇವಸ್ಥಾನದ ಸಮೀಪದ ಕೆರೆಗೆ ತೆರಳಿದ್ದು, ಈ ವೇಳೆ ಮೀನು ಹಿಡಿಯಲು ಹರೀಶ್ ನೀರಿಗಿಳಿದಿದ್ದಾರೆ. ಕೆರೆಯ ಒಂದು ಭಾಗದಿಂದ ಇನ್ನೊಂದು ದಡಕ್ಕೆ ಅನತಿ ದೂರದಲ್ಲಿ ಈಜುತ್ತಿದ್ದಾಗಲೇ ನಿಯಂತ್ರಣ ಕಳೆದುಕೊಂಡು ಮುಳುಗಿದ್ದು, ಸ್ನೇಹಿತರು ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ. ನಿನ್ನೆ ರಾತ್ರಿಯೇ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರು ಆಗಮಿಸಿ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ರು ಆದ್ರೆ ಕತ್ತಲೆಯ ಹಿನ್ನೆಲೆ ಕಾರ್ಯಚರಣೆ ಕಷ್ಟಸಾಧ್ಯವಾಗಿತ್ತು.

ಇಂದು ಬೆಳಗ್ಗೆ ಈಶ್ವರ್ ಮಲ್ಪೆ ನೇತೃತ್ವದ ತಂಡ ಮತ್ತೆ ಹುಡುಕಾಟ ಆರಂಭಿಸಿದ್ದು,ಶಬ್ಬೀರ್ ಮಲ್ಪೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಾವರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಧೀರ್ ಜಿ., ರಾಜಶೇಖರ್, ಪ್ರಕಾಶ್ ಆಚಾರ್ ಹಾಗೂ ಅಗ್ನಿ ಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಸತತ ಹುಡುಕಾಟದ ಬಳಿಕ ಈಶ್ವರ ಮಲ್ಪೆ ಅವರು ಕೆರೆಯ ಇನ್ನೊಂದು ಬದಿಯ ದಡದ ಸನಿಹ ಮೃತದೇಹ ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.