Friday, January 24, 2025
ಸುದ್ದಿ

ಮಚ್ಚು ಹಿಡಿದು ಹೆಂಡತಿಯನ್ನ ಅಟ್ಟಾಡಿಸಿ ಹಲ್ಲೆ ನಡೆಸಿದ ಪತಿ –ಕಹಳೆ ನ್ಯೂಸ್

ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ಮಚ್ಚು ಹಿಡಿದು ತನ್ನ ಪತ್ನಿಯನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ಹೊಳೆ ನರಸಿಪುರ ತಾಲೂಕಿನ ಹೊನ್ನಿಕೊಪ್ಪಲುವಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಗೊಳಗಾದ ಮಹಿಳೆ ಸುನೀತಾ ಎಂದು ಗುರುತಿಸಲಾಗಿದ್ದು ಇವರ ಮೊಣಕೈ, ಹೊಟ್ಟೆ ಮತ್ತು ಬೆರಳುಗಳಿಗೆ ಮಚ್ಚಿನ ಏಟಿನಿಂದ ಗಾಯಗಳಾಗಿದ್ದು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಜಗಳ ಬಿಡಿಸಲು ಬಂದವರ ಕಾರಿನ ಮೇಲೂ ಆರೋಪಿ ದಾಳಿ ನಡೆಸಿ ಜಖಂಗೊಳಿಸಿದ್ದಾನೆ.

ಪತಿ-ಪತ್ನಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಹಲವು ಬಾರಿ ರಾಜಿ ಸಂಧಾನ ನಡೆದಿತ್ತು. ಘಟನೆಯ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.