Friday, January 24, 2025
ಸುದ್ದಿ

ಭಾರತದಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ..? : ಪ್ರವಾಸ ಮುಗಿಸಿ ಆಗಮಿಸುತ್ತಿದ್ದಂತೆ ಸಂಸದರೊoದಿಗೆ ಮಾತಕಥೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ಅಮೆರಿಕ ಮತ್ತು ಈಜಿಪ್ಟ್ ದೇಶಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸೋಮವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ದೆಹಲಿಯ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್ ದೇವ್, ದೆಹಲಿಯ ಬಿಜೆಪಿ ಸಂಸದರು, ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮೊದಲಾದವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಬಿಜೆಪಿ ನಾಯಕರು ಅವರನ್ನು ಗುಲಾಬಿ ನೀಡಿ ಸ್ವಾಗತಿಸಿದರು.

ಬಿಜೆಪಿ ನಾಯರ‍್ನ ಭೇಟಿಯಾಗುತ್ತಿದ್ದಂತೆ ಭಾರತದಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ ಎಂದು ಮೋದಿಯವರು ಕೇಳಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಮನೋಜ್ ತಿವಾರಿ ಮಾತನಾಡಿ ಅವರು ವಿಮಾನದಲ್ಲಿ ಕೆಳಗಿಳಿಯುತ್ತಿದ್ದಂತೆ ನಮ್ಮನ್ನು ಕೇಳಿದ ಮಾತು ನಾವೆಲ್ಲಾ ಹೇಗೆ ಕೆಲಸ ಮಾಡುತ್ತಿದ್ದೇವೆ ಮತ್ತು ದೇಶದಲ್ಲಿ ಏನಾಗುತ್ತಿದೆ ಎಂದು ಪ್ರಧಾನಿಯವರು ಕೇಳಿದ್ದಾರೆ. ಜೊತೆಗೆ ಕೇಂದ್ರದಲ್ಲಿ ಮೋದಿ ಸರ್ಕಾರ 9 ವರ್ಷ ಆಡಳಿತ ನಡೆಸಿದ ಅಂಗವಾಗಿ ಬಿಜೆಪಿ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಶಾನ್ ಮತ್ತು ಸೇವಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜನರ ಬೆಳವಣಿಗೆ ಮತ್ತು ಅಬಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರನ್ನು ಪಕ್ಷದ ನಾಯಕರು ಜನರನ್ನು ಹೇಗೆ ತಲುಪುತ್ತಿದ್ದಾರೆ ಎಂದು ಕೇಳಿ ತಿಳಿದುಕೊಂಡರು.

ಸರ್ಕಾರದ ರಿಪೋರ್ಟ್ ಕಾರ್ಡು ಜನರನ್ನು ತಲುಪುತ್ತಿದೆಯೇ ಎಂದು ಕೇಳಿದರು. ಅಲ್ಲದೆ ಜೆ ಪಿ ನಡ್ಡಾ ಅವರ ತೆಲಂಗಾಣ ಭೇಟಿಯ ಬಗ್ಗೆ ಸಹ ಪ್ರಧಾನ ಮಂತ್ರಿಗಳು ಕೇಳಿ ತಿಳಿದುಕೊಂಡರು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ತಿಳಿಸಿದ್ದಾರೆ..