Saturday, November 23, 2024
ಸುದ್ದಿ

ನರಿಯನ್ನು ನುಂಗಿದ ಹೆಬ್ಬಾವು – ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಬ್ಬಾವು ಕಾಡಿಗೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಉಪಾಯಬಲ್ಲ ನರಿಯನ್ನು ಬೃಹತ್ ಹೆಬ್ಬಾವೊಂದು ಚಾಣಾಕ್ಯದಿಂದ ಬಲೆಗೆ ಸಿಲುಕಿಸಿ ನುಂಗಿದ್ದು ತದನಂತರದಲ್ಲಿ ಗ್ರಾಮಸ್ಥರು ಆ ಹೆಬ್ಬಾವನ್ನು ಹಿಡಿದು ಸೆಲ್ಫಿ ತೆಗೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಕಡಬ ತಾಲೂಕಿನ ಹಳೆ ಸ್ಟೇಷನ್ ಸಮೀಪದ ಬೆದ್ರಾಜೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ನರಿಯೊಂದನ್ನು ಹಿಡಿದು ನುಂಗಲು ಯತ್ನಿಸಿತ್ತು. ಈ ವೇಳೆ ನರಿಯು ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿತ್ತು. ಸ್ಥಳೀಯ ವ್ಯಕ್ತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೃಹತ್ ಗಾತ್ರದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಹೆಬ್ಬಾವು ನುಂಗಿದ್ದು ನರಿಯೋ ಅಥವಾ ನಾಯಿಯೋ ಎನ್ನುವುದು ಹಲವು ಜನರಿಗೆ ಅನುಮಾನವಿತ್ತು. ಗುಡ್ಡದಿಂದ ಹೆಬ್ಬಾವು ನರಿಯನ್ನು ಬೆನ್ನಟ್ಟಿ ಬಂದಿರುವುದನ್ನು ಸ್ಥಳೀಯರೊಬ್ಬರು ಗಮನಿಸಿದ್ದರು. ಹೀಗಾಗಿ ನರಿಯೇ ಆಗಿರುವುದನ್ನು ಖಚಿತಪಡಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಹೆಬ್ಬಾವು ಬಂದಿದೆ ಎಂಬ ವಿಚಾರ ತಿಳಿದು ಗ್ರಾಮದ ಜನರು ಸೇರಿದಂತೆ ಹಲವು ಭಾಗಗಳಿಂದ ಜನ ಆಗಮಿಸಿದ್ರು. ಅಲ್ಲದೇ ಹಾವನ್ನು ಹಿಡಿದ ಬಳಿಕ ಫೋಟೋ ತೆಗೆಯಲು ಜನ ಮುಗಿ ಬಿದ್ದಿದ್ದು, ಹಲವು ಜನರು ಹಾವನ್ನು ಹಿಡಿದು ಸೆಲ್ಫಿಯೂ ತೆಗೆದ ಘಟನೆ ನಡೆಯಿತು.