Friday, January 24, 2025
ಸುದ್ದಿ

ಕೇರಳಕ್ಕೆ ಆಗಮಿಸಲಿರುವ ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಅಬ್ದುಲ್ ನಾಸೀರ್ ಮದನಿ – ಕಹಳೆ ನ್ಯೂಸ್

ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಅಬ್ದುಲ್ ನಾಸೀರ್ ಮದನಿ ಇಂದು ಸಂಜೆ 6.15 ಕ್ಕೆ ವಿಮಾನದಲ್ಲಿ ಕೊಚ್ಚಿನ್‌ಗೆ ತೆರಳಲಿದ್ದಾನೆ. ಈ ಪ್ರಯಾಣಕ್ಕಾಗಿ ಈತ 6,76,101 ರೂಪಾಯಿಗಳನ್ನು ಪಾವತಿ ಮಾಡಿದ್ದು, ಈತನ ಭದ್ರತೆಗಾಗಿ ಓರ್ವ ಆರ್ ಎಸ್‌ಐ, ಮೂವರು ಪಿಸಿಗಳು, ಒಬ್ಬ ಚಾಲಕನನ್ನು ನಿಯೋಜಿಸಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು


ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳುತ್ತಿರುವ ಮದನಿ ಸುಪ್ರೀಂ ಕೋರ್ಟ್ ನಲ್ಲಿ ಕೇರಳಕ್ಕೆ ತೆರಳಲು ಮನವಿ ಸಲ್ಲಿಸಿದ್ದ.
ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಕೇರಳದ ಕೊಲ್ಲಂ ಜಿಲ್ಲೆಯ ಅನ್ವರ್ ಸಿರಿ ಸಸ್ತುಂಮಕುಟ ಎಂಬ ಊರಿಗೆ ಅಬ್ದುಲ್ ನಾಸೀರ್ ಮದನಿ ತೆರಳುತ್ತಿದ್ದು, ಈ ಹಿನ್ನೆಲೆ ಕೇರಳ ಪೊಲೀಸರಿಗೂ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇಲೆ 12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಚಾರ್ಜ್ ಹಣವನ್ನು ಮದನಿ ಪಾವತಿ ಮಾಡಿದ್ದಾನೆ. ಒಟ್ಟು 12 ದಿನ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

14 ವರ್ಷಗಳ ನಂತರ ಕೇರಳದ ಎರ್ನಾಕುಲಂ ಜಿಲ್ಲೆಯ ಅಂಬಲಮೇಡುವಿನಲ್ಲಿ ತನ್ನ 75 ವರ್ಷದ ತಂದೆ, 64 ವರ್ಷದ ತಾಯಿ, ಪತ್ನಿ ಮತ್ತು 17 ವರ್ಷದ ಮಗನನ್ನು ಭೇಟಿಯಾಗಲು ಇದೇ ಮೊದಲ ಬಾರಿಗೆ ಆರೋಪಿ ಹೋಗುತ್ತಿದ್ದಾರೆ. ಆತ ಜೂನ್ 28 ರಿಂದ 30ರವರೆಗೆ ಮೂರು ದಿನಗಳ ಕಾಲ ತನ್ನ ಕುಟುಂಬದೊಂದಿಗೆ ಇರಲಿದ್ದಾರೆ.

ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಗಂಗಾಧರ ಸಿಎಂ ಆದೇಶ ಹೊರಡಿಸಿದ್ದು, ಜಲೀಲ್ ಅವರಿಗೆ ತಮ್ಮ ಕುಟುಂಬವನ್ನು ಭೇಟಿಯಾಗಲು ಅನುಮತಿ ನೀಡಿದ್ದಾರೆ. ಕಳೆದ 15 ವರ್ಷಗಳಿಂದ ತನ್ನ ಮಗನನ್ನು ಭೇಟಿಯಾಗಿಲ್ಲ. ಮಗ ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಗನ ಶಿಕ್ಷಣ, ಕುಟುಂಬ ಮತ್ತು ಪೋಷಕರ ಆರೋಗ್ಯದ ಬಗ್ಗೆ ಸೂಚನೆ ನೀಡಲು ಮತ್ತು ಜೂನ್ 29ರಂದು ಬಕ್ರೀದ್ ಆಚರಿಸಲು ಬಯಸುವುದಾಗಿ ಕೇಳಿಕೊಂಡಿದ್ದ ಆತನ ಮನವಿಯನ್ನು ನ್ಯಾಯಾಲಯ ಪರಿಗಣಿಸಿದೆ.

ಪ್ರಯಾಣದ ಅವಧಿಯನ್ನು ಹೊರತುಪಡಿಸಿ, ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯೊಳಗೆ ಮಾತ್ರ ಆತ ಮನೆಗೆ ಭೇಟಿ ನೀಡಲು ಅವಕಾಶ ನೀಡಬೇಕು ಎಂಬ ಷರತ್ತಿಗೆ ಒಳಪಟ್ಟು, ಆರೋಪಿ ನಂ. 3 ಜಲೀಲ್‌ನನ್ನು ಆತನ ಸ್ವಂತ ವೆಚ್ಚದಲ್ಲಿ ಸೂಕ್ತ ಬೆಂಗಾವಲು ಸಹಿತ ಆತನ ಸ್ವಗ್ರಾಮಕ್ಕೆ ಕರೆದೊಯ್ಯುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಆರೋಪಿಯು ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಅಂಬಲಮೇಡು ಪೊಲೀಸ್ ಠಾಣೆಯಲ್ಲಿ ಇರಬೇಕು ಮತ್ತು ಅವರ ಕುಟುಂಬವನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.

ಕೇರಳದ ಮುಸ್ಲಿಮರ ಮತ್ತು ಕೆಲ ರಾಜಕಿಯ ಪಕ್ಷಗಳ ಪಾಲಿನ ಹೀರೋ ಆಗಿರುವ ಅಬ್ದುಲ್ ನಾಸೀರ್ ಮದನಿ ಕರ್ನಾಟಕದ ಪಾಲಿನ ವಿಲನ್.. ಈತ 1998ರಲ್ಲಿ ಕೊಯಿಮತ್ತೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ 58 ಮಂದಿ ಸಾವಿಗೆ ಕಾರಣನಾಗಿದ್ದ. 8 ವರ್ಷ ಕಂಬಿ ಎಣಿಸಿದ್ದ.. ಜೈಲಿನಿಂದ ಬಿಡುಗಡೆಯಾಗಿ ‘ಜಾತ್ಯತೀತ’ವೆಂದು ಹೇಳಿಕೊಂಡಿದ್ದ. ನಂತ್ರ ಬೆಂಗಳೂರಿನಲ್ಲಿ 2008ರ ಜುಲೈ 25ರಂದು ಬೆಚ್ಚಿಬೀಳಿಸಿದ್ದ ಸರಣಿ ಸ್ಫೋಟದಲ್ಲಿ ಆರೋಪಿಯಾಗಿದ್ದು ಸದ್ಯ ಈತ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. ಇದೀಗ ತಂದೆಯ ಅನಾರೋಗ್ಯ ಹಿನ್ನಲೆಯಲ್ಲಿ ಕೇರಳಕ್ಕೆ ಆಗಮಿಸಿದ್ದು ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ.