Friday, January 24, 2025
ಸುದ್ದಿ

ಹೊಟೇಲ್‌ನಲ್ಲಿ ಬೌ ಬೌ ಮಾಂಸ ಪತ್ತೆ..! : ದಂಗಾದ ಅಧಿಕಾರಿಗಳು –ಕಹಳೆ ನ್ಯೂಸ್

ಘಮ ಘಮಿಸೋ ಖಾದ್ಯಗಳು ಸಿಕ್ರೆ ನಾಲಗೆ ರುಚಿಯನ್ನ ಹೆಚ್ಚಿಸಿ ಸ್ವಲ್ಪ ಜಾಸ್ತಿನೇ ಹೊಟ್ಟೆ ತುಂಬುತ್ತೆ…ಅಲ್ವಾ.. ಹೀಗೆ ನಾಲಗೆಗೆ ರುಚಿ ರುಚಿಯಾದ ನಾನ್‌ವೆಜ್ ಊಟ ನೀಡ್ತಾ ಇದ್ದ ಹೊಟೇಲ್‌ವೊಂದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬೌ ಬೌ ಮಾಂಸ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರಿನ ಕೆ.ಆರ್.ನಗರದ ಪ್ರಭುಶಂಕರ ಬಿಲ್ಡಿಂಗ್‌ನಲ್ಲಿರುವ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಅಧಿಕಾರಿಗಳು ನಾಯಿ ಮಾಂಸ ಅಲ್ಲದೆ ಕೊಳೆತ ಇತರ ಮಾಂಸಗಳನ್ನೂ ಪತ್ತೆ ಹಚ್ಚಿದ್ದಾರೆ.

ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್ ಹಿಡಿದ ಮಾಂಸಾಹಾರ ಪತ್ತೆಯಾಗಿದೆ. ಇಂತಹ ಆಹಾರಗಳಿಂದ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಮಾಲಕರಿಗೆ ದಂಡ ವಿಧಿಸಿ, ರೆಸ್ಟೋರೆಂಟ್ ಬಂದ್ ಮಾಡಿಸಿದ್ದಾರೆ. ದಾಳಿ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ ಮತ್ತಿತರರು ಇದ್ದರು.