ಪುತ್ತೂರು ಶಾಸಕ ಅಶೋಕ್ ರೈ ಭೇಟಿ ಸಂದರ್ಭ ಇತಿಹಾಸ ಪ್ರಸಿದ್ಧ ಹಿಂದೂಗಳ ಶ್ರದ್ಧಾಕೇಂದ್ರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಮುಸ್ಲಿಂ ವ್ಯಕ್ತಿಯ ಪ್ರವೇಶ ; ಘಟನೆ ಮರುಕಳಿಸದಂತೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರದಿಂದ ಮನವಿ – ಕಹಳೆ ನ್ಯೂಸ್
ಪುತ್ತೂರು ಮಹಾಲಿಂಗೇಶ್ವರ ದೇವಾಲಯದೊಳಗೆ ಅನ್ಯಮತೀಯರ ಪ್ರವೇಶಕ್ಕೆ ನಿರ್ಭಂಧ ಹೇರುವಂತೆ ಪುತ್ತಿಲ ಪರಿವಾರದಿಂದ ಮನವಿ
ಮಹಾಲಿಂಗೇಶ್ವರ ದೇವಾಲಯದ ಒಳಗೆ ಅನ್ಯ ಸಮುದಾಯದವರನ್ನ ಬಿಡದಂತೆ ಪುತ್ತಿಲ ಪರಿವಾರದಿಂದ ದೇವಾಲಯದ ವ್ಯವಸ್ಧಾಪನ ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಶಾಸಕರೊಂದಿಗೆ ಅನ್ಯಮತಿಯ ಕೆಲ ಯುವಕರು ದೇವಾಲಯದ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೇ ಅನುಮಾನಸ್ಪದ ರೀತಿಯಲ್ಲಿ ಫೋಟೋ ತೆಗಿಯುವುದು ಕಂಡುಬದಿದ್ದು ಈ ಹಿನ್ನಲೆಯಲ್ಲಿ ಇನ್ನು ಮುಂದೆ ದೇವಾಲಯದ ಒಳಗೆ ಅನ್ಯಮತಿಯರ ಪ್ರವೇಶವನ್ನ ನಿರ್ಭಂದಿಸುವAತೆ ಪುತ್ತಿಲ ಪರಿವಾರದ ವತಿಯಿಂದ ದೇವಾಲಯದ ವ್ಯವಸ್ಧಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಅವರಿಗೆ ಮನವಿ ಸಲ್ಲಿಸಲಾಯಿತು. ಅಲ್ಲದೇ ಮುಂದಿನ ದಿನಗಳಲ್ಲಿ ಇದು ಕಂಡು ಬಂದಲ್ಲಿ ಹೋರಾಟದ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ಮಾತನಾಡಿದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಇವರು ‘ಈ ಬಗ್ಗೆ ನಮಗೆ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಕುರಿತಾಗಿ ದೇವಳದಲ್ಲಿ ಬೋರ್ಡ್ ಅಳವಡಿಸುವ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.