Sunday, November 24, 2024
ಉಡುಪಿಸುದ್ದಿ

ಅಳಿದುಳಿದ ಕಾಲು ಸಂಕದ ಅವಯವಗಳ ಮೇಲೆಯೇ ಶವ ಸಾಗಾಟದ ಪ್ರಯಾಸ – ಕಹಳೆ ನ್ಯೂಸ್

ಉಡುಪಿ : ಕಟಪಾಡಿ ಕಾಲು ಸಂಕದ ಅಳಿದುಳಿದ ಅವಯವಗಳ ಅವಶೇಷದ ಮೇಲೆಯೇ ಹರಸಾಹಸಪಟ್ಟು ದಹನಕ್ಕೆ ಪಾರ್ಥಿವ ಶರೀರ ಸಾಗಿಸಿದ ಘಟನೆ ಘಟಿಸಿದೆ.

ಪಾಂಗಾಳ ಗುಡ್ಡೆ ತುಂಗರಬೈಲಿನಲ್ಲಿ ಲಲಿತಾ (67) ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರದ ಅಂತಿಮ ಪ್ರಕ್ರಿಯೆ ಕೋಟೆ ಗ್ರಾ.ಪಂ.ನ ರುದ್ರಭೂಮಿಯಲ್ಲಿ ನಡೆಸಲು ಈ ಹರಸಾಹಸ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಾಜು 30 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಾಲು ಸಂಕವು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೆ ಅನಿವಾರ್ಯವಾಗಿ ಈ ಭಾಗದ ಜನತೆ ಇದೇ ಅಳಿದುಳಿದ ಕಾಲು ಸಂಕವನ್ನು ಅವಲಂಬಿಸಬೇಕಾಗಿದೆ.

ಕೈಪುಂಜಾಲು ಭಾಗದ ಸಮಸ್ತರಿಗೂ ಇದೇ ಕಾಲು ಸೇತುವೆ ಮುಖ್ಯ ಕೊಂಡಿಯ ರಸ್ತೆಯಾಗಿತ್ತು ಎಂಬುದನ್ನು ಮೃತರ ಪುತ್ರ ಪ್ರದೀಪ್ ಹೇಳುತ್ತಾರೆ . ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ ಮೂಲಕ ಸ್ಮಶಾನಕ್ಕೆ ಸಾಗಿಸಲು ಬಹಳಷ್ಟು ಪ್ರಯಾಸ ಪಡುವಂತಾಯಿತು ಎಂದು ಸಮಾಜ ಸೇವಕ ಆಸ್ಟಿನ್ ಕೋಟ್ಯಾನ್ ಕಟಪಾಡಿ ತಿಳಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಆಳಿದುಳಿದ ಅವಶೇಷಗಳನ್ನು ತೆಗೆದು ಸುಸಜ್ಜಿತ ಕಾಲು ಸೇತುವೆ ನಿರ್ಮಿಸಿ ತುಂಗರ ಬೈಲು ಭಾಗದ ನಿವಾಸಿಗಳ ಸುಗಮ ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.