Recent Posts

Monday, January 20, 2025
ಸುದ್ದಿ

ಸಂತ ಫಿಲೋಮಿನಾ ಪಿಯುಕಾಲೇಜಿಗೆ ರಾಜ್ಯಮಟ್ಟ ಬಿ.ವೋಕ್ ಉತ್ಸವ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದರ ಆಶ್ರಯದಲ್ಲಿ ನಡೆದ ಬಿ.ವೋಕ್ 2023 ಉತ್ಸವ ರಾಜ್ಯಮಟ್ಟದ ಎಜುಕೇಶನ್ ಕಲ್ಚರಲ್ ಫೆಸ್ಟ್ ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿತೀಯ ವಿಜ್ಞಾನ ವಿಭಾಗದ ನೋರ್ಮನ್‌ಡೇರನ್ ಡಿ ಸೋಜಾ ಮೋಟಾರ್ ಮೌತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ಕೃಷ್ಣ ಪ್ರಿಯ ಎ ಮೋಟಾರ್ ಮೌತ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರಥಮ ವಾಣಿಜ್ಯ ವಿಭಾಗ ದಧನ್ವೀನ್ ಮತ್ತು ಸಾಕೀನಾ ಆಯ್ಮಾನ್‌ಇವರು ಶಾರ್ಕ್ಟ್ಯಾಂಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಹಾಗೂ ಚಲನ ಚಿತ್ರ ರಸಪ್ರಶ್ನೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನಿರೋಶ್‌ರೈ ಮತ್ತುರಾಕೇಶ್‌ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಕಾಲೇಜಿನ ಪ್ರಾಂಶುಪಾಲ ರೆ.ಫಾಅಶೋಕ್ ರಾಯನ್‌ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ವಿಭಾಗದ ಸುಮನಾ ಕೆ, ರಶ್ಮಿ ಪಿ ಎಸ್ ಹಾಗೂ ಭರತ್ ಜಿ ಪೈ ಉಪಸ್ಥಿತರಿದ್ದರು