Monday, January 20, 2025
ಸುದ್ದಿ

ಬಸ್ಸಿನಲ್ಲಿ ಕುಸಿದು ಬಿದ್ದು ವ್ಯಕ್ತಿ ¸ಸಾವು – ಕಹಳೆ ನ್ಯೂಸ್

ಬೆಳ್ತಂಗಡಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರಿನ ಪಡೀಲ್ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಲಾಯಿಲ ನಿವಾಸಿ ತಾಜ್ ಬಾವುಂಞಿ ಎಂದು ಗುರುತಿಸಲಾಗಿದೆ. ಅವರು ಕೆಲಸಕ್ಕೆಂದು ಬೆಳಗ್ಗೆ ಮಂಗಳೂರಿಗೆ ತೆರಳಿ ಸಂಜೆ ಮನೆಗೆ ಹಿಂದಿರುಗಿ ಬಸ್ಸಿನಲ್ಲಿ ಬರುತಿದ್ದ ವೇಳೆ ಮಂಗಳೂರಿನ ಪಡೀಲ್ ಬಳಿ ಬಸ್ಸಿನಲ್ಲಿಯೇ ಕುಸಿದು ಬಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ಕೊಂಡು ಹೋಗಿದ್ದಾರೆ.ಅದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಬಳಿಕ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಲಾಯಿಲನೂರುಲ್ ಹುದಾ ಎಜುಕೇಶನ್ ಅಂಡ್ ಚಾರ್ಟೆಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದ ಅವರು ಇಲೆಕ್ಟ್ರಿಷಿಯನ್ ಆಗಿ ವೃತ್ತಿ ಮಾಡುತ್ತಿದ್ದರು.