ನಾಳೆ ಐ.ಆರ್.ಸಿ.ಎಂ.ಡಿ ಅಬಾಕಸ್ ಶಿಕ್ಷಣ ಸಂಸ್ಥೆಯ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ -ಕಹಳೆ ನ್ಯೂಸ್
ಪುತ್ತೂರು : ಜೂನ್ 29ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಕಳೆದ ಏಪ್ರಿಲ್ ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶ್ರೀ ಮನೋಹರ್ ಪ್ರಸಾದ್ ಮಂಗಳೂರು ಹಾಗು ಗೌರವ ಅತಿಥಿಗಳಾಗಿ ಶ್ಯಾಮ ಸುದರ್ಶನ್ ಭಟ್, ಮುಖ್ಯಸ್ಥರು ಕಹಳೆ ಕೇಬಲ್ ಟಿವಿ. ಶ್ರೀ ಹರೀಶ್ ಸುಲಾಯ ಒಡ್ಡ೦ಬೆಟ್ಟು , ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ ಮಂಗಳೂರು, ಡಾ। ರವಿನಾರಾಯಣ, ಸಂಜೀವಿನಿ ಕ್ಲಿನಿಕ್ ಪುತ್ತೂರು, ಭಾಗವಹಿಸಲಿದ್ದಾರೆ.
TRS ಸಂಸ್ಥೆ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ 32 ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ವಿವಿಧ ವಿಭಾಗಳಗಲ್ಲಿ ಅನೇಕ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ