ಬಂಟ್ವಾಳ: ಬಕ್ರೀದ್ ಹಬ್ಬದ ಪ್ರಯುಕ್ತ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪುಂಜಾಲಕಟ್ಟೆ ಎಸ್ ಐ.ನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
ಬಕ್ರೀದ್ ಹಬ್ಬದ ಆಚರಣೆಯ ನೆಪದಲ್ಲಿ ಯಾವುದೇ ಅಶಾಂತಿಯ ವಾತವರಣ ಉಂಟಾಗಬಾರದು, ಅಕ್ರಮವಾಗಿ ಗೋಸಾಗಟ ನಡೆಯಬಾರದು ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ನೈತಿಕ ಪೋಲೀಸ್ ಗಿರಿ ಪ್ರಕರಣಗಳು ನಡೆಯಬಾರದು ಎಂದು ಎಸ್.ಐ.ನಂದಕುಮಾರ್ ಅವರು ಠಾಣೆಯಲ್ಲಿ ಸಮುದಾಯದ ಪ್ರಮುಖ ನಾಯಕರಿಗೆ ತಿಳಿಸಿದರು.
ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಣೆ ಮಾಡಿ ಇತರರಿಗೆ ಮಾದರಿಯಾಗಿ ಎಂದು ಸಲಹೆ ನೀಡಿದರು. ಹಬ್ಬದ ಸಂದರ್ಭದಲ್ಲಿ ಕಾನೂನು ಮೀರಿ ವಾಹನಗಳಲ್ಲಿ ಪ್ರಯಾಣ ಮಾಡಿ ಅಪಘಾತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಮನೆಯ ಯಜಮಾನರಿಗೆ ತಿಳಿಸಿ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಒಟ್ಟಿನಲ್ಲಿ ಶಾಂತಿಯುತ ಬಕ್ರೀದ್ ಆಚರಣೆ ಪ್ರಮುಖ ವಿಚಾರವಾಗಿದೆ ಎಂದು ಅವರು ತಿಳಿಸಿದರು.