Tuesday, January 21, 2025
ಸುದ್ದಿ

ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನಲ್ಲಿ ಸ್ವರಕ್ಷಣಾ ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ಮಕ್ಕಳ ರಕ್ಷಣಾಘಟಕ ಹಾಗೂ ಮಹಿಳಾ ಸಬಲೀಕರಣ ಘಟಕದ ಆಶಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಯಂರಕ್ಷಣಾ ಕಾರ್ಯಾಗಾರವು ಜೂ 28ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂ¥ನ್ಮೂಲ ವ್ಯಕ್ತಿಗಳಾಗಿ ಸ್ವರಕ್ಷಾ ಫಾರ್‌ವಿಮೆನ್ ಟ್ರಸ್ಟ್ ಸ್ಥಾಪಕ ಕಾರ್ತಿಕ್ ಎಸ್ ಕಟೀಲು ಅವರು ಮಹಿಳೆಯರ ಮೇಲೆ ನಡೆಯುವ ದೈಹಿಕ ದೌರ್ಜನ್ಯದ ಬಗ್ಗೆ,ದೈನಂದಿನ ಜೀವನದಲ್ಲಿ ಅಸಹನೀಯಸ್ಪರ್ಶಗಳನ್ನು ವಿರೋಧಿಸುವ ಬಗ್ಗೆ ಸುಲಭ ಹಾಗೂ ಅಗತ್ಯದಐದು ತಂತ್ರಗಳನ್ನು ತಿಳಿಸಿದರು.ತಮ್ಮ ಮಾತೃಶ್ರೀ ಶೋಭಲತಾ ಅವರ ನೇತೃತ್ವದಲ್ಲಿ ಸ್ವರಕ್ಷಣೆಯ ತಂತ್ರಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತೋರಿಸಿಕೊಟ್ಟರು.ಮಾನಸಿಕದೌರ್ಜನ್ಯವು ದೈಹಿಕ ದೌರ್ಜನ್ಯಕ್ಕಿಂತ ತೀವ್ರವಾಗಿದ್ದು ಇದನ್ನು ತಡೆಯುವಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಸದಾ ಸಿದ್ದರಾಗಿರಬೇಕು.ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರುತಮ್ಮನ್ನು ಶಾಂತಿಧೈರ್ಯ ಮತ್ತು ಆತವಿಶ್ವಾಸದಿಂದ ಸ್ವರಕ್ಷಣೆ ಮಾಡಿಕೊಳ್ಳಬೇಕು.ಎಂದು ಹೇಳಿದರು

ಮುಖ್ಯ ಅತಿಥಿಗಳಾದ ಸಂತಫಿಲೋಮಿನಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕರಾದರೆ.ಫಾ ಸ್ಟಾö್ಯನಿ ಪಿಂಟೋ ಮಾತನಾಡಿ ಹೆಚ್ಚಿನ ಮನುಷ್ಯರೆಲ್ಲರೂ ಭಯದ ವಾತಾವರಣದಲ್ಲಿ ಬದುಕುತ್ತಾರೆ ಈ ಭಯವನ್ನು ಹೋಗಲಾಡಿಸುವ ಕ್ರಮಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕುಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್‌ರಾಯನ್‌ಕ್ರಾಸ್ತಾ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸ್ವಯಂರಕ್ಷಣೆಕಾರ್ಯಾಗಾರದ ಅನಿವಾರ್ಯತೆಇದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಮಹಿಳಾ ಸಬಲೀಕರಣಘಟಕ ಹಾಗೂ ಮಕ್ಕಳರಕ್ಷಣಾಘಟಕದ ನಿದೇರ್ಶಕರು, ವಿದ್ಯಾರ್ಥಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದನಿಖಿತಾ ಸ್ವಾಗತಿಸಿ ಶರನ್ ವಂದಿಸಿರೋಶೆಲ್ ಡಿ ಸಿಲ್ವಾಕಾರ್ಯಕ್ರಮವನ್ನು ನಿರೂಪಿಸಿದರು.