Tuesday, April 1, 2025
ದಕ್ಷಿಣ ಕನ್ನಡಮೂಡಬಿದಿರೆಸುದ್ದಿಹೆಚ್ಚಿನ ಸುದ್ದಿ

ಮೂಡುಬಿದಿರೆ: ಅಕ್ರಮ ಗೋ ಸಾಗಾಟ ತಡೆಗಟ್ಟುವಂತೆ ಹಿಂ.ಜಾ.ವೇ ವತಿಯಿಂದ ಪೊಲೀಸ್ ನಿರೀಕ್ಷಣಾಧಿಕಾರಿಗೆ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದುಪಡಿ 1975) ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವುಗಳ ಬಲಿ, ಕುರ್ಬಾನಿ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ.

ಇದೇ ಜೂನ್ 29, 30, ಜುಲೈ 1 ರಂದು ಕುರ್ಬಾನಿಯ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಮತ್ತು ಇತರೆ ದಿನಗಳಲ್ಲಿ ಯಾವುದೇ ರೀತಿಯ ಗೋವಂಶ ವಧೆ,ಬಲಿ,ಕುರ್ಬಾನಿ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವಾಗದಂತೆ ಮೂಡುಬಿದಿರೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಹಿಂದೂ ಜಾಗರಣ ವೇದಿಕೆಯಿಂದ ಪೊಲೀಸ್ ನಿರೀಕ್ಷಣಾಧಿಕಾರಿ ನಿರಂಜನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭಗಳಲ್ಲಿ ಗೋವುಗಳನ್ನು ಪಾಲಿಸುವವರ ಮನೆಯಿಂದ, ಬೀದಿಗಳಿಂದ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ಅಹೋ ರಾತ್ರಿ ಗಸ್ತು ಹಾಗೂ ಅಗತ್ಯ ಇದ್ದಲ್ಲೆಲ್ಲಾ ನಾಕಾಬಂದಿ ಹಾಕಬೇಕಾಗಿ ವಿನಂತಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜುಲೈ 2 ರ ತನಕ ಯಾರೂ ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರವಹಿಸಬೇಕು. ಒಂದು ವೇಳೆ ಆ ರೀತಿ ಗೋ ವಂಶ ತಂದು ಕಟ್ಟಿ ಹಾಕಿದ್ದು ಕಂಡರೆ ತಕ್ಷಣ ಅದಕ್ಕೆ ಪಶು ಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿಸಿ ಫೋಟೋ ತೆಗೆದಿರಿಸಿ ಮಾಲಕರ ಬಳಿ ಮುಚ್ಚಳಿಕೆ ತೆಗೆದುಕೊಳ್ಳಬೇಕು. ಜುಲೈ 3 ರಂದು ಗೋ ವಂಶಗಳು ಬದುಕಿರುವ ಬಗ್ಗೆ ಅದನ್ನು ಖಾತ್ರಿ ಪಡಿಸಿಕೊಳ್ಳಬೇಕು, ಜುಲೈ 3 ರ ಮೊದಲು ದನ ತೀರಿ ಹೋದರೆ ಅದನ್ನು ಹೂಳದೇ ಪೋಲೀಸರಿಗೂ ಮತ್ತು ಪಶು ಸಂಗೋಪನಾ ಇಲಾಖೆಯವರಿಗೂ ತಿಳಿಸಿ ಧಫನ ಮಾಡಬೇಕು.

ಒಂದು ವೇಳೆ ಜುಲೈ 2 ರಂದು ಪರಿಶೀಲಿಸುವಾಗ ಆ ವ0ಶಗಳು ಕಂಡು ಬರದಿದ್ದಲ್ಲಿ ಅವರ ಮೇಲೆ, ಗೋ ಹತ್ಯಾ ನಿಷೇಧ ಕಾಯಿದೆ 2020 ರ ಪ್ರಕಾರ ಪ್ರಕರಣ ದಾಖಲಿಸಬೇಕು. ಕುರ್ಬಾನಿ ನಿಷೇದವಿರುವ ಬಗ್ಗೆ ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸಬೇಕು.ಹಿಂದೂ ಸಮಾಜವು ಗೋವನ್ನು ದೇವರೆಂದು ಪೂಜಿಸುವ ಗೋವಿಗೆ ಯಾವುದೇ ರೀತಿಯ ಬಲಿ | ಕುರ್ಬಾನಿ , ಹತ್ಯೆ , ಹಿಂಸೆ ಆದರೆ ಹಿಂದೂ ಸಮಾಜ ಸಹಿಸುವುದಿಲ್ಲ. ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ, ಪೊಲೀಸರು,
ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು. ಗೋವಿಗೆ ಕೊಡುವ ರಕ್ಷಣೆಗೆ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣಾ ವೇದಿಕೆ ಸರ್ವ ರೀತಿಯಲ್ಲಿ ಸಹಕಾರವನ್ನು ನೀಡುವುದಾಗಿ ಹಿಂ.ಜಾ.ವೇ ತಿಳಿಸಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ