Tuesday, January 21, 2025
ಸುದ್ದಿ

ಕೊಂಬೆಟ್ಟು ಪ ಪೂ ಕಾಲೇಜು ಅಭಿವೃದ್ದಿ ಸಮಿತಿ ಸಭೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ; ಶಾಸಕ ಅಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು : ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಅಭಿವೃದ್ದಿ ಸಮಿತಿ ಸಭೆಯು ನಿನ್ನೆ ಕಾಲೇಜಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಅಭಿವೃದ್ದಿ ಮತ್ತು ಪಲಿತಾಂಶದ ಬಗ್ಗೆ ಶಾಸಕರು ಪ್ರಾಂಶುಪಾಲರಿAದ ಮಾಹಿತಿ ಪಡೆದುಕೊಂಡರು. ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಶಾಸಕರು ಕಾಲೇಜಿನ ಅಭಿವೃದ್ದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾನು ಇಲ್ಲಿ ಕಲಿಯುವಾಗ ಹೇಗಿತ್ತೋ ಅದೇ ಮಾದರಿಯಲ್ಲಿ ಈಗಲೂ ಇದೆ. ಇಲ್ಲಿ ವಿಶೇಷ ಅಭಿವೃದ್ದಿ ಕೆಲಸಗಳೇನು ನಡೆದಿಲ್ಲ. ಇಲಾಖೆಯಿಂದ ಬರುವ ಅನುದಾನದವನ್ನು ಬಳಸಿ ಅಲ್ಪಸ್ವಲ್ಪ ಕಾಮಗಾರಿ ನಡೆದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕೊಂಬೆಟ್ಟು ಹೈಸ್ಕೂಲ್ ಹಾಗೂ ಪ ಪೂ ಕಾಲೇಜು ಅಭಿವೃದ್ದಿಯಾಗಬೇಕಿದೆ ಎಂದು ಶಾಸಕರು ಹೇಳಿದರು.

ಪಿಯುಸಿ ವಿಭಾಗಕ್ಕೆ ವಿಶೇಷ ಕೋಚಿಂಗ್

ಪಿಯುಸಿ ವಿಜ್ಞಾನ ವಿಭಾಗಕ್ಕೆ ವಿಶೇಷ ಕೋಚಿಂಗ್ ಅವಶ್ಯಕತೆ ಇದೆ. ಖಾಸಗಿ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸಕರನ್ನು ಕರೆಸಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಆದರೆ ಬಡವರ ಮಕ್ಕಳೇ ಇರುವ ಸರಕಾರಿ ಕಾಲೇಜುಗಳಲ್ಲಿ ಈ ವ್ಯವಸ್ಥೆ ಇಲ್ಲದೇ ಇದ್ದು ಅದನ್ನು ಪ್ರಾರಂಭ ಮಾಡುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದರು. ವಿಶೇಷ ಕೋಚಿಂಗ್ ತರಗತಿಯಿಂದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗುತ್ತದೆ. ಮುಂದೆ ನೀಟ್, ಸಿಇಟಿ ಪರೀಕ್ಷೆ ಬರೆಯುವ ಸಂದರ್ಬದಲ್ಲಿ ಮತ್ತು ಪಿಯುಸಿ ವಿಜ್ಞಾನ ವಿಭಾಗದಲ್ಲಿರುವ ಕೋರ್ಸುಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವಂತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಂಬೆಟ್ಟು ಶಾಲಾ ಮಾಜಿ ಕಾರ್ಯಾಧ್ಯಕ್ಷರಾದ ಜೋಕಿಂ ಡಿಸೋಜಾ, ಪುಡಾ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ , ಉಪ ಪ್ರಾಂಶುಪಾಲರಾದ ವಸಂತ ಮೂಲ್ಯ , ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಸುಚಿತ್ರ, ಸವಿತಾ, ಶೀಲಾವತಿ ಮತ್ತಿತರರು ಉಪಸ್ಥಿತರಿದ್ದರು.