Recent Posts

Monday, January 20, 2025
ಸುದ್ದಿ

ಅತ್ತಾವರ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕದಲ್ಲಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಬಾಬುಗುಡ್ಡ ಮತ್ತು ಬಿಜೆಪಿ ಎಸ್.ಸಿ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ‌ ವತಿಯಿಂದ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ – ಕಹಳೆ ನ್ಯೂಸ್

ಕುದ್ಮುಲ್ ರಂಗರಾಯರ ಅರಿಯಲು, ಅವರನ್ನು ಅನುಸರಿಸಲು ಅವರ ಬದುಕನ್ನು ಅದ್ಯಯನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದೆ ಬಂದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಕಾಮತ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ತಾವರ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕದಲ್ಲಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಬಾಬುಗುಡ್ಡ ಮತ್ತು ಬಿಜೆಪಿ ಎಸ್.ಸಿ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ‌ ವತಿಯಿಂದ ಹಮ್ಮಿಕೊಂಡ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಕಾಮತ್, ಮಹಾತ್ಮರ ಗುರು ಎಂಬ ಬಿರುದು ಪಡೆದ ರಂಗರಾಯರು ಹಿಂದುಳಿದ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತುವ ಮೂಲಕ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಹೋರಾಡಿದ ಧೀಮಂತ ವ್ಯಕ್ತಿ ಎಂದರು.

ರಂಗರಾಯರ ಬದುಕನ್ನು ಅದ್ಯಯನ ಮಾಡುವ ಮೂಲಕ ಅವರ ಧ್ಯೇಯವನ್ನು ನಮ್ಮಲ್ಲಿ ಅಳವಡಿಸಬೇಕಿದೆ. ಬೇಧ ಭಾವಗಳಿಲ್ಲದ ಸುಸ್ಥಿರ ಸಮಾಜ ನಿರ್ಮಾಣಕ್ಕೆ ರಂಗರಾಯರ ಹಾದಿಯಲ್ಲಿ ಹೆಜ್ಜೆ ಹಾಕೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ.ಆರ್ ಹೃದಯನಾಥ್ , ಉಪಾಧ್ಯಕ್ಷರಾದ ಶ್ಯಾಮ ಕರ್ಕೇರ, ನಗರ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ , ಭರತ್ ಸೂಟರ್ ಪೇಟೆ, ಮನೋಜ್ ಕೋಡಿಕಲ್ , ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ ಡಿ ಬಂಗೇರ, ಪಶ್ಚಿಮ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ದೀಪಕ್ ಪೈ , ಬೂತ್ ಅಧ್ಯಕ್ಷರಾದ ಅರ್ಚನಾ ರೈ, ಎಸ್. ಸಿ ಮೋರ್ಚಾ ಉಪಾಧ್ಯಕ್ಷರಾದ ಸಂದೀಪ್ ಬೋಳೂರು, ಪ್ರಧಾನಕಾರ್ಯದರ್ಶಿ ಪ್ರಜ್ವಲ್ ಚಿಲಿಂಬಿ, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಾಜಿ ಅಧ್ಯಕ್ಷರಾದ ಜಯಚಂದ್ರ ಕೊಟ್ಟಾರ ಕ್ರಾಸ್ , ರಾಜೇಶ್ ಅನನ್ಯ ಕ್ರಿಯೇಷನ್ಸ್ ಬೆಂಗಳೂರು , ಟ್ರಸ್ಟಿಗಳಾದ ದಯಾಕರ್ ಬಿ.ಆರ್, ಶಶಿಕಾಂತ್ ಬಿ.ಎಸ್ , ಪ್ರಭಾಕರ ಯು, ವಸಂತ ಬಂಗೇರ, ಅನಿತಾ ದಯಾಕರ್ , ಪ್ರಮುಖರುಗಳಾದ ಲಲ್ಲೇಶ್ ಕುಮಾರ್ ಪುಷ್ಪರಾಜ್ ಶೆಟ್ಟಿ , ನೀತಾ, ರಶ್ಮಿ, ಪ್ರಮೋದ್ ಕೊಟ್ಟಾರಿ, ಅಜಿತ್ ಡಿಸಿಲ್ವ ಸಂಪತ್, ನಾರಾಯಣ, ತರುಣ್, ವಿದ್ಯಾ ದೇವದಾಸ್ ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಎಸ್.ಸಿ ಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ‌ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.