Monday, January 20, 2025
ಸುದ್ದಿ

ಆನ್ ಲೈನ್ ಉದ್ಯೋಗದ ಆಮಿಷ – ಲಕ್ಷಾಂತರ ರೂ. ವಂಚನೆ – ಕಹಳೆ ನ್ಯೂಸ್

ಉಡುಪಿ : ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಆಮಿಷಕ್ಕೆ ಒಳಗಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಸಂಧ್ಯಾ ಎಸ್. ವಂಚನೆಗೊಳಗಾದ ಮಹಿಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಉದ್ಯೋಗನ್ವೆಷಣೆಯಲ್ಲಿರುವಾಗ ವೆಬ್ ಸೈಟ್ ಲಿಂಕ್ ನಲ್ಲಿ ಸಿಕ್ಕಿದ ಮೊಬೈಲ್ ನಲ್ಲಿ ಬಂದ ಸೂಚನೆಯಂತೆ ಲಕ್ಷಾಂತರ ರೂ.ಹಣವನ್ನು ಪಾವತಿಸಿ ವಂಚನೆಗಾಗಿದ್ದಾರೆ.
ಫೇಸ್ಬುಕ್ ನಲ್ಲಿ ಅಮೆಝಾನ್ ವರ್ಕ್ ಫ್ರಮ್ ಹೋಮ್ ಎಂಬ ವೆಬ್ ಸೈಟ್ ಲಿಂಕ್ ಸಿಕ್ಕಿದ್ದು, ಅದರಲ್ಲಿದ್ದ ಮೊಬೈಲ್ ಗೆ ಕರೆ ಮಾಡಿದಾಗ ನೀಡಿದ ಟಾಸ್ಕ್ ಅನ್ನು ನಂಬಿ ಗೂಗಲ್ ಪೇ, ಪೇಟಿಎಂ ಮೂಲಕ ಒಟ್ಟು 2,88,991ರೂ. ಹಣವನ್ನು ಕಳುಹಿಸಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ನೀಡದೇ, ತಾನು ವರ್ಗಾವಣೆ ಮಾಡಿದ ಹಣವನ್ನು ಸಹ ಮರಳಿಸದೇ ವಂಚಿಸಿರುವುದಾಗಿ ಸಂಧ್ಯಾ ಅವರು ನಗರದ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.