Friday, November 22, 2024
ಸುದ್ದಿ

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಯೋಜನೆ ಜಾರಿ ; ಯಾರು ಬಿಲ್ ಪಾವತಿಸವೇಕು ? ಯಾರಿಗೆ ಫ್ರೀ? – ಕಹಳೆ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊAಡಿದೆ. ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಗೃಹ ಜ್ಯೋತಿ ಜಾರಿಗೆ ಬರಲಿದೆ, ಇದರ ಜೊತೆಯಲ್ಲಿ ನಾಳೆಯಿಂದ ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬರಲಿದ್ದು ರಾಜ್ಯದ ಜನತೆಗೆ ಡಬಲ್ ಧಮಾಕಾ ಆರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು , 200 ಯುನಿಟ್‌ವರೆಗಿನ ಕರೆಂಟ್ ಬಳಕೆಗೆ ಬಿಲ್ ಪಾವತಿ ಮಾಡುವ ಅಗತ್ಯ ಇರೋದಿಲ್ಲ. ಆಗಸ್ಟ್ ಒಂದರಿAದ ನಿಮ್ಮ ಕೈ ಸೇರಲಿರುವ ಬಿಲ್‌ನಲ್ಲಿ ಈ ವಿನಾಯಿತಿಯನ್ನು ನೀವು ಕಾಣಬಹುದಾಗಿದೆ.
12 ತಿಂಗಳ ನಿಮ್ಮ ಕರೆಂಟ್ ಬಳಕೆ ಸರಾಸರಿ 200 ಯುನಿಟ್ ಆಗಿದ್ದರೆ ಸಂಪೂರ್ಣ ವಿದ್ಯುತ್ ಬಿಲ್ ಸರ್ಕಾರವೇ ಭರಿಸಲಿದೆ. ಆದರೆ ಇದಕ್ಕಿಂತ ಕೊಂಚ ಯುನಿಟ್ ಬಳಕೆ ಹೆಚ್ಚಾದರೂ ಅದಕ್ಕೆ ನೀವೆ ಜವಾಬ್ದಾರರಾಗುತ್ತೀರಿ. ಜೂನ್ 18ರಿಂದ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಆರಂಭಗೊAಡಿದ್ದು ಈಗಾಗಲೇ 8 ಲಕ್ಷ ಜನರು ಈ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ. ಇನ್ನೂ ಒಂದೂವರೆ ಕೋಟಿ ಜನರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕಿದೆ .
ಇನ್ನು ಜುಲೈ 1ರಿಂದ ಜಾರಿಗೆ ಬರಲಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ 170 ರೂಪಾಯಿ ಸಿಗಲಿದೆ. ಅಂದರೆ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂಪಾಯಿ ಸಿಗಲಿದೆ. ಇನ್ನುಳಿದ ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಬಹುದಾಗಿದೆ.