Monday, January 20, 2025
ಉಡುಪಿಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಕೆಎಂಸಿ ಆಸ್ಪತ್ರೆಯ ಮೂಳೆ ತಜ್ಞಾ ಡಾ.ಸೂರಿ ಸ್ಥಳದಲ್ಲೇ ಸಾವು -ಕಹಳೆ ನ್ಯೂಸ್

ಉಡುಪಿ : ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ವೈದ್ಯ ಸ್ಥಳದಲ್ಲೇ ಮೃತಪಟ್ಟ ಘಟನೆ  ನಡೆದಿದೆ.

ಮೃತರು ಮಣಿಪಾಲದ ಕಸ್ತೂರ್ಬಾ ಹಾಸ್ಪಿಟಲ್ ಮೂಳೆ ತಜ್ಞ ಡಾಕ್ಟರ್ ಸೂರ್ಯ ನಾರಾಯಣ ಯಾನೆ ಡಾಕ್ಟರ್ ಸೂರಿ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೋಟೆಲ್ ಹಾಟ್ ಅಂಡ್ ಸ್ಪೈಸಿ ಎದುರುಗಡೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರ್ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ 3 ಪಲ್ಟಿಯಾಗಿದ್ದು ಡಾಕ್ಟರ್ ಸೂರ್ಯನಾರಾಯಣ ಅವರ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕಾಗಮಿಸಿದ ಮಣಿಪಾಲ ಪೊಲೀಸರು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.