Recent Posts

Sunday, January 19, 2025
ಸಂತಾಪಸುದ್ದಿ

ಡಿಶ್ ರಿಪೇರಿ ವೇಳೆ ಮೂರನೇ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು – ಕಹಳೆ ನ್ಯೂಸ್

ಬಂಟ್ವಾಳ : ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ವಸತಿ ನಿಲಯದ ಮೂರು ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೈಕಂಬ ಎಂಬಲ್ಲಿ ಜೂನ್ 30 ರ ಮಧ್ಯಾಹ್ನದ ವೇಳೆ ನಡೆದಿದೆ.

ಆಚಾರಿಪಲ್ಕೆ ನಿವಾಸಿ ಯತೀಶ್ (32) ಮೃತಪಟ್ಟ ದುರ್ದೈವಿ. ಯತೀಶ್ ಅವರು ಕೈಕಂಬದ ಹೋಲಿ ಪ್ಯಾಮಿಲಿ ವಸತಿ ನಿಲಯದ ಮನೆಯೊಂದರ ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೇಲಿನಿಂದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಸತಿ ನಿಲಯದ ಕೆಲ ಭಾಗದಲ್ಲಿರುವ ಬಾವಿಯ ಮೇಲೆ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದು, ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ನಡೆದ ತಕ್ಷಣ ಮಿಲಾದುನ್ನಭಿ ಸಂಘದ ನುಸ್ರತ್ ಅಂಬ್ಯುಲೆನ್ಸ್ ಮೂಲಕ , ಕೇವಲ 16 ನಿಮಿಷಗಳಲ್ಲಿ ಚಾಲಕ ಸಮಾಜ ಸೇವಕ ಸಮಾದ್ ಕೈಕಂಬ ಅವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ… ತಲೆಗೆ ಗಂಭೀರವಾದ ಗಾಯವಗಿದ್ದರಿಂದ ಆತ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಡಪಡಿಸಿದ್ದರು.