Recent Posts

Monday, January 20, 2025
ಸುದ್ದಿ

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ (ಶನಿ) ಪೂಜೆ – ಕಹಳೆ ನ್ಯೂಸ್

ವಿಟ್ಲ: ನಮ್ಮ ನಂಬಿಕೆ ನಮ್ಮನ್ನು ನಡೆಸುತ್ತದೆ. ಆತ್ಮ ವಿಶ್ವಾಸ ನಮ್ಮಲ್ಲಿರಬೇಕು. ದೇವರ ಮೇಲಿನ ಭಕ್ತಿ ನಮ್ಮನ್ನು ಕಾಪಾಡುತ್ತದೆ. ನಮ್ಮ ಬದುಕಿಗೆ ದಿಕ್ಕು ಅಗತ್ಯ. ಸನಾತನ ಹಿಂದೂ ಧರ್ಮ ಶ್ರೇಷ್ಟವಾದುದು. ಶನಿಯ ಬಗ್ಗೆ ಭಯಬೇಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿ ಎಂದರೆ ಧೀರ್ಘ ದೇಹಿ. ಶನಿದೇವನು ಎಲ್ಲರನ್ನೂ ಉದ್ದರಿಸಲಿ. ಹಿಂದೂ ಧರ್ಮವನ್ನು ಬೆಳೆಸುವಲ್ಲಿ ನಾವೆಲ್ಲರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ವ್ಯಕ್ತಿ ಭಕ್ತಿಯಿಂದ ಧಾರ್ಮಿಕನಾಗುತ್ತಾನೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಜು.1ರಂದು ಸಂಸ್ಥಾನದಲ್ಲಿ ನಡೆದ ಸಾಮೂಹಿಕ ಶನೈಶ್ಚರ (ಶನಿ) ಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಬದುಕನ್ನು ನಾವು ಸಾಗಿಸುವಾಗ ಧಾರ್ಮಿಕ ಶ್ರದ್ಧೆ ಅಗತ್ಯ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಆತ್ಮವಿಶ್ವಾಸಗಳನ್ನು ವರ್ಧಿಸುತ್ತದೆ.ನಮ್ಮ ಉದ್ದೇಶ ಒಂದೇ ಇರಬೇಕು. ನಮ್ಮ ನಂಬಿಕೆ ಗಟ್ಟಿಕೊಳಿಸುವ ಕೆಲಸ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಾಧ್ಯ.

ನಮ್ಮ ಬದುಕಲ್ಲಿ ಮಾನವೀಯ ಚಿಂತನೆ ಅಗತ್ಯ. ಮಾನವೀಯತೆ ಮನುಷ್ಯ ಧರ್ಮ. ಪುರಾಣಕಥೆಗಳು ನಮ್ಮನ್ನು ಭಕ್ತಿಯೆಡೆಗೆ ಕೊಂಡೊಯ್ಯುತ್ತದೆ. ಭಕ್ತಿ ಭಾವುಕತೆ ನಮ್ಮನ್ನು ಬದುಕಿಸುತ್ತದೆ. ಅಹಂಕಾರ ಕಡಿಮೆಯಾದಾಗ ಮಿತೃತ್ವ ಬೆಳೆಯಲು ಸಾಧ್ಯ ಎಂದರು. ಊರ ಪರವೂರ ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.