Monday, January 20, 2025
ಸುದ್ದಿ

ಪ್ರವಾಸಿಗರಿಗೆ ಆಟ – ಬೀಚ್ ಲೈಫ್ ಗಾರ್ಡ್ ಗಳಿಗೆ ಪ್ರಾಣಸಂಕಟ- ಕಹಳೆ ನ್ಯೂಸ್

ಉಡುಪಿ ಶಕ್ತಿ ಯೋಜನೆ ಬಳಿಕ ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗೆ ತೀರ್ಥ ಕ್ಷೇತ್ರಗಳಿಗೆ ಬರುವವರು ಉಡುಪಿ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದು, ಇದರಲ್ಲಿ ಕೆಲವರು ಬೀಚ್‌ಗೆ ಇಳಿಯುವ ದುಸ್ಸಾಹಸ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹವರನ್ನು ನಿಯಂತ್ರಣ ಮಾಡೋದೆ ಲೈಫ್ ಗಾರ್ಡ್ ಗಳಿಗೆ ಹಾಗೂ ಪ್ರವಾಸಿಮಿತ್ರರಿಗೆ ಸವಾಲಾಗಿದೆ.
ಇನ್ನೂ ಜೂನ್ ಮೊದಲ ವಾರದಲ್ಲಿ ಬೀಚ್ ಪ್ರವೇಶಕ್ಕೆ ನಿಷೇಧ ಹೇರಿದರೂ ಕೂಡ ಈ ಬಾರಿ ಮುಂಗಾರು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಪ್ರವಾಸಿಗರು ನಿರಂತರವಾಗಿ ಮಲ್ಪೆ ಬೀಚಿಗೆ ಆಗಮಿಸುತ್ತಿದ್ದಾರೆ.

ಸದ್ಯ ಮಲ್ಪೆ ಬೀಚಿನಲ್ಲಿ ಆಳೇತರದ ತೆರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಬೀಚ್ ಸುತ್ತಲೂ ಕೆಂಪು ಬಾವುಟ ಹಾಗೂ ಬಲೆ ಕಟ್ಟಿ ಒಳ ಬಾರದಂತೆ ನೋಡಿಕೊಳ್ಳಲಾಗುತ್ತಿದೆ.