Recent Posts

Sunday, January 19, 2025
ಸುದ್ದಿ

ಜುಲೈ 3ರಿಂದ 7ರ ವರೆಗೆ ಮುಳಿಯ ಜ್ಯುವೆಲ್ಸ್ ನಿಂದ ‘ಶುಭ್ರ ಬಂಗಾರ’: ಉಚಿತ ಸರ್ವಿಸ್ ಕ್ಯಾಂಪ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್, ಜುಲೈ 3ರಿಂದ 7ರ ವರೆಗೆ ‘ಶುಭ್ರ ಬಂಗಾರ’ ಉಚಿತ ಸರ್ವಿಸ್ ಕ್ಯಾಂಪ್ ಆಯೋಜಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಹಕರ ಆಭರಣಗಳು ಹಳೆಯದಾಗಿದ್ದರೆ, ಹೊಳಪು ಕಳೆದುಕೊಂಡಿದ್ದರೆ, ತುಂಡಾಗಿದ್ದರೆ, ಬೆಂಡಾಗಿದ್ದರೆ ಅಥವಾ ಯಾವುದೇ ರೀತಿಯಲ್ಲಿ ಆಕರ್ಷಣೆ ಕಳೆದುಕೊಂಡಿದ್ದರೆ ಅವುಗಳನ್ನು ನಿಮ್ಮ ಸಮೀಪದ ಮುಳಿಯ ಜ್ಯುವೆಲ್ಸ್ಗೆ ತಂದು ಉಚಿತವಾಗಿ ಸರ್ವಿಸ್ ಮಾಡಿಸಿಕೊಳ್ಳಬಹುದು.

ಆಭರಣಗಳನ್ನು ತೊಳೆದು ಶುದ್ಧ ಮಾಡುವುದು, ಚಿನ್ನದ ಕೋಟಿಂಗ್ ಮಾಡುವುದು, ತುಂಡಾದ ಆಭರಣಗಳ ಜೋಡಣೆ, ಸುವ್ಯವಸ್ಥಿತ ರೀತಿಯ ರಿಪೇರಿಗಳನ್ನು ಈ ಉಚಿತ ಕ್ಯಾಂಪ್‌ನಲ್ಲಿ ಮಾಡಿಕೊಡಲಾಗುವುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.ಗ್ರಾಹಕರು ಈ ಸದವಕಾಶವನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.