Sunday, January 19, 2025
ಸುದ್ದಿ

ಚಲಿಸುತ್ತಿದ್ದ ಬಸ್​​ನಲ್ಲಿಯೇ ಯುವತಿ ಜೊತೆ ಕಂಡಕ್ಟರ್​​ ದೈಹಿಕ ಸಂಪರ್ಕ : ವಿಡಿಯೋ ಮಾಡಿಹರಿಬಿಟ್ಟ ಪ್ರಯಾಣಿಕರು – ಕಹಳೆ ನ್ಯೂಸ್

ಬಸ್​ನಲ್ಲಿ ಪ್ರಯಾಣಿಕರಿಗೆ ಟಿಕೆಟ್​ ನೀಡಬೇಕಿದ್ದ ಕಂಡಕ್ಟರ್​ ಚಲಿಸುತ್ತಿದ್ದ ಬಸ್​ನಲ್ಲಿಯೇ ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಹತ್ರಾಸ್​ ಡಿಪೋಗೆ ಸೇರಿದ ಬಸ್​​ನಲ್ಲಿ ಈ ಘಟನೆ ಸಂಭವಿಸಿದೆ. ಈ ಬಸ್​ ಲಕ್ನೋ ಮಾರ್ಗವಾಗಿ ತೆರಳುತ್ತಿತ್ತು ಎನ್ನಲಾಗಿದೆ.

ಕಂಡಕ್ಟರ್​​ನ ಈ ಅಶ್ಲೀಲ ವರ್ತನೆಯನ್ನು ನೋಡಿದ ಕೆಲವು ಪ್ರಯಾಣಿಕರು ತಮ್ಮ ಮೊಬೈಲ್​ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ಮಾತ್ರವಲ್ಲದೇ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹರಬಿಟ್ಟಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಕಂಡಕ್ಟರ್​ನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕ ಮೊಬೈಲ್​ ಕ್ಯಾಮರಾ ಹಿಡಿದುಕೊಂಡು ಕಂಡಕ್ಟರ್​ ಇದ್ದ ಜಾಗಕ್ಕೆ ಬರುತ್ತಾರೆ. ಈ ವೇಳೆ ಯುವತಿಯ ಜೊತೆ ಬೆಡ್​ಶೀಟ್​ ಹಾಕಿಕೊಂಡಿದ್ದ ಕಂಡಕ್ಟರ್ ಪ್ರಯಾಣಿಕನ ಮೊಬೈಲ್​ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಪ್ರಯಾಣಿಕರು ಹಾಗೂ ಕಂಡಕ್ಟರ್​ ನಡುವೆ ವಾಗ್ವಾದ ಜೋರಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು