Sunday, January 19, 2025
ಸುದ್ದಿ

ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು – ಕಹಳೆ ನ್ಯೂಸ್

ಕಲಬುರಗಿ: ಭೀಮಾ ನದಿಯ ನೀರು ಕುಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೋನಾಹಿಪ್ಪರಗಿ ಗ್ರಾಮದ ರಾಮು ದೊಡ್ಡಮನಿ ಹಾಗೂ ದೇವ್ರು ಹೊಸಮನಿ ಮೃತ ಬಾಲಕರು ಎಂದು ಗುರುತಿಸಲಾಗಿದೆ.
ರಾಮು ಹಾಗೂ ದೇವ್ರು ನದಿಯ ನೀರು ಕುಡಿಯಲು ಎಂದು ಭೀಮಾ ನದಿಗೆ ಹೋಗಿದ್ದರು.ಈ ಸಂದರ್ಭ ರಾಮು ಪಾಚಿ ಮೇಲೆ ಕಾಲಿಟ್ಟು ನದಿಗೆ ಜಾರಿಗೆ ಬಿದ್ದಿದ್ದಾನೆ.
ಈ ವೇಳೆ ರಾಮುನನ್ನು ರಕ್ಷಿಸಲು ಹೋಗಿದ್ದ ದೇವು ಸಹ ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಶವದ ಹುಡುಕಾಟ ನಡೆಸಿ ಹೊರತೆಗೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.