Sunday, January 19, 2025
ಕ್ರೈಮ್ಸುದ್ದಿ

ಆನ್ ಲೈನ್ ಗೇಮ್ ಚಟ : ಬರೋಬ್ಬರಿ 65 ಲಕ್ಷ ಕಳೆದುಕೊಂಡ ಯುವಕ ಆತ್ಮಹತ್ಯೆ – ಕಹಳೆ ನ್ಯೂಸ್

ಆನ್ ಲೈನ್ ಗೇಮ್ ಚಟದಿಂದಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡದ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆಯಲ್ಲಿ ನಡೆದಿದೆ.

ವಿಜೇತ್ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ಯುವಕ. ಯುವಕ ಶುಕ್ರವಾರ ಮನೆಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಯುವಕ ಮತ್ತೆ ಮನೆಗೆ ವಾಪಸ್ಸಾಗಿಲ್ಲ. ಆ ಬಳಿಕ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿಜೇತ್ ಸುಮಾರು 65 ಲಕ್ಷ ರೂ. ಗೂ ಹೆಚ್ಚಿನ ಹಣವನ್ನು ಆನ್ ಲೈನ್ ಗೇಮ್ಸ್ ನಲ್ಲಿ ಕಳೆದುಕೊಂಡಿದ್ದ ಎಂದು ವರದಿಯಾಗಿದ್ದು, ಈ ಸಂಬಂಧ ಶಿರಸಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು