Recent Posts

Sunday, January 19, 2025
ಸುದ್ದಿ

“ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಪರಿಣಾಮಕಾರಿ ಬದಲಾವಣೆ ಆಗಲಿದೆ” : ಅರುಣ್ ಶ್ಯಾಮ್ – ಕಹಳೆ ನ್ಯೂಸ್

ಮಂಗಳೂರು : ಸಾಮಾಜಿಕ ನ್ಯಾಯ, ಲಿಂಗ ತಾರತಮ್ಯ, ನೈಜ ಜಾತ್ಯಾತೀತತೆ, ಸಹಬಾಳ್ವೆ, ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಪರಿಣಾಮಕಾರಿ ಬದಲಾವಣೆ ಆಗಲಿದೆ ಎಂದು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಅಧಿವ್ಯಕ್ತ ಪರಿಷತ್, ಮಂಗಳೂರು ಹಾಗೂ ಚಿಂತನ ಗಂಗಾ ಜಂಟಿಯಾಗಿ ಆಯೋಜಿಸಿದ ಏಕರೂಪ ನಾಗರಿಕ ಸಂಹಿತೆ – ಸಾಮಾಜಿಕ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಿರುವ ವಿವಿಧ ಕಾನೂನುಗಳಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನಕ್ಕೆ ಅಡಚಣೆ ಉಂಟಾಗಿ ಪ್ರಕರಣಗಳ ಇತ್ಯರ್ಥ ಜಟಿಲವಾಗುತ್ತದೆ. ಆದ್ದರಿಂದ ನ್ಯಾಯಾಲಯಗಳೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರಕಾರಗಳಿಗೆ ಸೂಚಿಸಿವೆ ಎಂದು ಅರುಣ್ ಶ್ಯಾಮ್ ತಿಳಿಸಿದರು.

ಪೆÇಸ್ಕೊ ಕಾಯ್ದೆ, ಅತ್ಯಾಚಾರ ಪ್ರಕರಣ, ಸಂತ್ರಸ್ತೆಗೆ ಪರಿಹಾರ ಸಹಿತ ಕೆಲವು ವಿಷಯಗಳಲ್ಲಿ ವೈಯಕ್ತಿಕ ಕಾನೂನು ಮತ್ತು ರಾಷ್ಟ್ರದ ಕಾನೂನುಗಳಲ್ಲಿ ಯಾವುದನ್ನು ಆಧರಿಸಿ ತೀರ್ಪು ನೀಡುವ ಬಗ್ಗೆ ನ್ಯಾಯಾಲಯಗಳಲ್ಲಿ ಗೊಂದಲ ಏರ್ಪಡುತ್ತಿದೆ. ಇದರಿಂದ ಸಂತ್ತಸ್ರೆಗೆ ಸಿಗಬೇಕಾದ ನ್ಯಾಯದಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ. ಯುಸಿಸಿ ಜಾರಿಗೆ ಬಂದರೆ ಮಹಿಳಾ ಸಬಲೀಕರಣಕ್ಕೂ ಹೊಸ ವ್ಯಾಖ್ಯಾನ ಬಂದು ಮಹಿಳಾ ಸಶಕ್ತಿಕರಣಕ್ಕೆ ಇದು ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಈಗ ಇರುವ ಮೀಸಲಾತಿ ಅಥವಾ ಭವಿಷ್ಯದಲ್ಲಿ ಜಾರಿಗೆ ಬರಬಹುದಾದ ಯಾವ ಮೀಸಲಾತಿಗೂ ಯುಸಿಸಿಯಿಂದ ಯಾವ ತೊಂದರೆಯೂ ಇಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಹಂತದಲ್ಲಿಯೇ ಇದರ ಪರವಾಗಿ ಧ್ವನಿ ಎತ್ತಿದ್ದರು. ಆದರೆ ಕೆಲವರ ವಿರೋಧದಿಂದ ಇದು ಆವತ್ತು ಜಾರಿಗೆ ಬರಲು ಆಗಿರಲಿಲ್ಲ ಎಂದು ತಿಳಿಸಿದರು.

ಪ್ರಸ್ತುತ ದೇಶದ ಲಾ ಕಮೀಷನ್ ಜನರ ಅಭಿಪ್ರಾಯ ಸಂಗ್ರಹಿಸಿ ರೂಪುರೇಶೆ ಸಿದ್ಧಪಡಿಸಿದ ಬಳಿಕ ಕೇಂದ್ರ ಸರಕಾರ ಕರಡು ಮಸೂದೆ ರಚಿಸಿ ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಅರುಣ್ ಶ್ಯಾಮ್ ತಿಳಿಸಿದರು. ನಾಗರಿಕರು ವಿವಿಧ ಪ್ರಶ್ನೆಗಳನ್ನು ಕೇಳಿದರು.
ಅರುಣ್ ಶ್ಯಾಮ್ ಅವರಿಗೆ ಭವ್ಯ ಪ್ರಭಾವಳಿಯಿಂದ ಅಲಂಕೃತಗೊಂಡ ದೇವರ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.

ಚಿಂತನ ಗಂಗಾ ಸಂಘಟನೆಯ ಡಾ. ರಾಘವೇಂದ್ರ ಹೊಳ್ಳ ಸ್ವಾಗತಿಸಿ ಪ್ರಸ್ತಾಪಿಸಿದರು. ಅಧಿವ್ಯಕ್ತ ಪರಿಷತ್ ನ ಈಶ್ವರ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಅರುಣ್ ಜಿ ಶೇಟ್ ಪ್ರಾರ್ಥಿಸಿದರು. ಕಿರಣ್ ಧನ್ಯವಾದ ಸಮರ್ಪಿಸಿದರು. ಪೂಜಾ ನಿರೂಪಿಸಿದರು.