Recent Posts

Monday, January 20, 2025
ಸುದ್ದಿ

ಸಾರಡ್ಕ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ : 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ –ಕಹಳೆ ನ್ಯೂಸ್

ರಸ್ತೆಗೆ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದು, ಎರಡು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾದ ಘಟನೆ ಸಾರಡ್ಕದ ಚೆಕ್ ಪೋಸ್ಟ್ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆ ಸಹಿತ ಗಾಳಿ ಬೀಸಿದ ಪರಿಣಾಮ ಬೃಹತ್ ಗಾತ್ರದ ಮರವೊಂದು ಸಾರಡ್ಕ ಚೆಕ್ ಪೋಸ್ಟ್ನ ಬಳಿ ರಸ್ತೆಗೆ ಬಿದ್ದಿದ್ದು, ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗಿನ ಹೊತ್ತು ವಾಹನ ದಟ್ಟಣೆ ಅಧಿಕವಿರುತ್ತದೆ, ಹಾಗಾಗಿ ವಾಹನ ಸವಾರರು ಎರಡು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಎದುರಿಸಿದ್ದಾರೆ.

ಇನ್ನೂ ಸ್ಥಳೀಯರು ಸೇರಿಕೊಂಡು ಮರವನ್ನು ಯಶಸ್ವಿಯಾಗಿ ತೆರವುಗೊಳಿಸಿ, ವಾಹನ ಸವಾರರು ತೆರಳಲು ಅವಕಾಶ ಕಲ್ಪಿಸಿದ್ದಾರೆ.