Monday, January 20, 2025
ಸುದ್ದಿ

ಚಾರ್ಮಾಡಿ ಘಾಟ್ ನಲ್ಲಿ ಮೂರು ವಾಹನಗಳು ಪಲ್ಟಿ – ಕಹಳೆ ನ್ಯೂಸ್

ಚಾರ್ಮಾಡಿ ಫಾಟ್‌ನಲ್ಲಿ ಮೂರು ವಾಹನಗಳು ಪಲ್ಟಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ. ನಿನ್ನೆ ಭಾರಿ ಮಳೆ ಸುರಿದ ಪರಿಣಾಮ ರಸ್ತೆ ಜಾರುತ್ತಿದ್ದ ಕಾರಣ ವಾಹನಗಳು ಉರುಳಿ ಬಿದ್ದಿವೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಾರ್ಮಾಡಿ ಪೇಟೆ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಒಟ್ಟು ಮೂರು ವಾಹನಗಳು ಉರುಳಿ ಬಿದ್ದ ಘಟನೆ ಭಾನುವಾರ ಸಂಜೆ ನಡೆದಿದೆ. ಉಜಿರೆಯಿಂದ ಮೂಡಿಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ. ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ನಡೆಯುತ್ತವೆ ಎನ್ನಲಾಗಿದೆ.