Wednesday, November 27, 2024
ಸುದ್ದಿ

SNM ಪಾಲಿಟೆಕ್ನಿಕ್ ವತಿಯಿಂದ ಬಡಮನೆಗಳಲ್ಲಿ ಶ್ರಮದಾನ – ಕಹಳೆ ನ್ಯೂಸ್

ಮೂಡುಬಿದಿರೆ:ಎನ್.ಎಸ್.ಎಸ್ ಘಟಕದ ವತಿಯಿಂದ ಮರೊಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಲ ಪ್ರದೇಶದಲ್ಲಿ ತೀರಾ ಬಡತನದಲ್ಲಿ ಇರುವ ಮನೆಯಲ್ಲಿ ಎಸ್.ಎನ್.ಎಮ್ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮರೋಡಿ ಗ್ರಾಮದ ನಂದಿಲ ಸುಂದರ ಇವರ ಮನೆ ತೀರಾ ಅವ್ಯವಸ್ಥೆ ಇಂದ ಕೂಡಿದ್ದು ಮಳೆಗಾಲದಲ್ಲಿ ಸೋರುವ ಸ್ಥಿತಿಯಲ್ಲಿ ಇತ್ತು. ಈ ಮನೆಗಳ ಮಾಡಿಗೆ ಟಾರ್ಪಲ್ ಹೊದೆಸಲಾಯಿತು. ಸುಂದರ ಇವರು ಅಂಗವಿಕಲರಾಗಿದ್ದು ದುಡಿಯಲು ಅಸಮರ್ಥರಾಗಿದ್ದಾರೆ , ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದು ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಇವರ ಮನೆಗೆ ಬಹಳ ವರ್ಷಗಳಿಂದ ಹಕ್ಕು ಪತ್ರದ ಸಮಸ್ಯೆ ಇದ್ದು, ಇತ್ತೀಚಿಗೆ ಪಂಚಾಯತ್ ಸದಸ್ಯರ ಹಾಗು ಅಧ್ಯಕ್ಷರ ಪ್ರಯತ್ನದಿಂದ ಹಕ್ಕುಪತ್ರ ದೊರಕಿದೆ ಹಾಗು ಮುಂದಿನ ದಿನದಲ್ಲಿ ಪಂಚಾಯತ್ ನಿಂದ ಮನೆ ನಿರ್ಮಿಸಿಕೊಡುವ ಬಗ್ಗೆ ಅಧ್ಯಕ್ಷರು ತಿಳಿಸಿದ್ದಾರೆ.

ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ಮನೆಗಳಿಗೆ ಇದೇ ರೀತಿಯ ಶ್ರಮದಾನ ಮಾಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಜೆ. ಜೆ. ಪಿಂಟೋ ಹಾಗು NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ರಾಮ್ ಪ್ರಸಾದ್ ಹಾಗೂ ಗೋಪಾಲಕೃಷ್ಣ ಇವರ ಮಾರ್ಗದರ್ಶನದಲ್ಲಿ , ಹಳೇ ವಿದ್ಯಾರ್ಥಿ ಪ್ರಮೋದ್ ರಾಜ್ ವಿದ್ಯಾರ್ಥಿ ನಾಯಕರಾದ ಪ್ರಖ್ಯಾತ್ , ಪ್ರಣಮ್, ಸುಜನ್, ಶ್ರವಣ್, ರಿತೇಶ್, ಸಮ್ಯಕ್, ಮಾನಸ, ಕಲ್ಯಾಣಿ, ಪ್ರೀತಿ, ನೇತೃತ್ವದಲ್ಲಿ ಸುಮಾರು 15 NSS ವಿದ್ಯಾರ್ಥಿಗಳು ಮನೆಗಳ ಸೇವಾ ಕಾರ್ಯದಲ್ಲಿ ಭಾಗವಹಿಸಿದರು.