Wednesday, November 27, 2024
ಸುದ್ದಿ

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಶೌರ್ಯ ವಿಪತ್ತು ಸಂಯೋಜಕರ ತರಬೇತಿ ಕಾರ್ಯಗಾರ –ಕಹಳೆ ನ್ಯೂಸ್

ಮಂಗಳೂರು ತಾಲೂಕಿನಲ್ಲಿ ಜನಜಾಗೃತಿ ವೇದಿಕೆ ವಿಭಾಗ ಬೆಳ್ತಂಗಡಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದನ್ವಯ ಶೌರ್ಯ ವಿಪತ್ತು ಸಂಯೋಜಕರ ತರಬೇತಿ ಕಾರ್ಯಗಾರವನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಜನಪಯೋಗಿ ಹಾಗೂ ದೇಶ ಮೆಚ್ಚಿಕೊಳ್ಳುವಂತಹ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಸೇವೆ ಮಾಡುವುದು ಮನುಷ್ಯನ ಸಹಜವಾದ ಪ್ರಕೃತಿ, ಅದನ್ನು ಸ್ವಾಭಾವಿಕಾವಾಗಿ ಮಾಡಬೇಕಾದರೆ ಪ್ರೇರಣೆ ಬೇಕು. ಶೌರ್ಯ ಕಾರ್ಯಕ್ರಮದಿಂದ ಇದು ಸಾಧ್ಯವಾಗಿದೆ.ಎಲ್ಲಾ ಸ್ವಯಂ ಸೇವಾಕರು ಸ್ವಯಂ ಪ್ರೇರಣೆಯಿಂದ, ಸೇವಾ ಮನೋಭಾವನೆಯಿಂದ ಸೇರಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಮಂಗಳೂರು ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರು ಚೆನ್ನಕೇಶವ ಸರ್ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲರನ್ನು ಸ್ವಾಗತಿಸಿದರು.

ನಂತರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿಪತ್ತು ನಿರ್ವಹಣಾ ಯೋಜನಾಧಿಕಾರಿಯಾದ ಜೈವಂತ ಪಟಗಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಅವರು ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ ದಕ್ಷಿಣ ಕನ್ನಡ ಜಿಲ್ಲೆ 1 ನಿರ್ದೇಶಕರಾದಂತಹ ಮಹಾಬಲ ಕುಲಾಲ್ ಮಂಗಳೂರು ತಾಲೂಕಿನ ವಿವತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ತಾಲೂಕಿನ ಎಲ್ಲಾ ಗ್ರಾಮಗಳಿಗೂ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಬೇಕಾಗಿ ಮನವಿ ಮಾಡಿದರು.

ಜಗದೀಶ್ ಅಡಪ ಉಷಾ ಫೈರ್ ಅಂಡ್ ಸೇಫ್ಟಿ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವರು ತರಬೇತಿ ನೀಡಿ, ಪ್ರತಿಯೊಬ್ಬರು ಕೂಡಾ ದುರಂತಗಳ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು. ದಹನಕ್ರಿಯೆ, ಬೆಂಕಿ ನಂದಿಸುವ ವಿಧಾನಗಳು, ಬೆಂಕಿಯ ವರ್ಗಿಕರಣ, ವಿದ್ಯುತ್ ಅಪಘಾತ, ರಸ್ತೆ ಅಪಘಾತ ಪ್ರಥಮ ಚಿಕಿತ್ಸೆ, ಹೃದಯಘಾತ ಮುಂತಾದ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದರು. ಸದ್ರಿ ಕಾರ್ಯಗಾರದಲ್ಲಿ ಸುಮಾರು 150 ಮಂದಿ ಸ್ವಯಂಸೇವಾಕರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.

ಅನಿಲ್ ಕುಮಾರ್ ಎಸ್.ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ತರಬೇತಿ ಕಾರ್ಯಗಾರದಲ್ಲಿ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರಾದಂತಹ ಚಂದ್ರಶೇಖರ್ ಉಚ್ಚಿಲ, ಸ್ಥಳೀಯ ಕಾರ್ಪೊರೇಟರ್ ಆದ ಸಂದೀಪ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಮಂಗಳೂರು ವಲಯದ ಅಧ್ಯಕ್ಷರಾದ ಮಾಧವ, ಪಣಂಬೂರು ವಲಯ ಅಧ್ಯಕ್ಷರಾದ ಹರೀಶ್, ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸತೀಶ್ ದೀಪಂ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಗಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.