Tuesday, January 21, 2025
ಸುದ್ದಿ

ಬೆಂಗಳೂರಿಗೆ ತೆರಳುತ್ತಿದ್ದ ಬಂಟ್ವಾಳದ ವ್ಯಕ್ತಿ ಹಾಸನದಲ್ಲಿ ಹೃದಯಾಘಾತದಿಂದ ರೈಲಿನಲ್ಲೇ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ: ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬಂಟ್ವಾಳ ವ್ಯಕ್ತಿಯೋರ್ವರು ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜನಾರ್ದನ ಅವರು ತಮ್ಮ ಕುಟುಂಬದ ಜತೆ ಭಾನುವಾರ ಸಂಜೆ ರೈಲಿನ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಾಸನ ತಲುಪುತ್ತಿದ್ದಂತೆ ಅನಾರೋಗ್ಯ ಕಾಣಿಸಿಕೊಂಡ ಪರಿಣಾಮ. ತಕ್ಷಣ ಅವರನ್ನು ಹಾಸನ ರೈಲು ನಿಲ್ದಾಣದಿಂದ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇವರು ಸಮಾಜ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದು, ಮತ್ತು ಸಾಮಾಜಿಕವಾಗಿ ಸಕ್ರೀಯರಾಗಿದ್ದ ಅವರು ಬಿಎಂಎಸ್ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಕುಲಾಲ ಸಂಘಟನೆ ಬೆಳವಣಿಗೆಗೆ ಶ್ರಮಿಸಿದ್ದು, ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದರು.