Friday, September 20, 2024
ಸುದ್ದಿ

ಸೊಸೆಯ ಗೃಹಬಂಧನದಿಂದ ಮಾವನನ್ನು ಕಾಪಾಡಿ ತನ್ನ ಸ್ವಂತ ಮನೆಯಲ್ಲಿ ಆಶ್ರಯ ನೀಡಿದ ಉಪ್ಪಿನಂಗಡಿ ಸಬ್’ಇನ್ಸ್ಪೆಕ್ಟರ್ ನಂದಕುಮಾರ್ ಮಾನವಿಯತೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ನಗರದ ಸಮೀಪದಲ್ಲಿರುವ ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ ಸತತ ಹಲವಾರು ದಿನಗಳಿಂದ ಸೊಸೆಯ ಕಿರುಕುಳದಿಂದ ಗೃಹಬಂದನದಲ್ಲಿದ್ದು, ಊಟ ಉಪಚಾರವಿಲ್ಲದೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು, ಉಪ್ಪಿನಂಗಡಿ ನಾಗರಿಕರು ವಿಷಯ ತಿಳಿದು ಕೆಂಡಮಂಡಲರಾಗಿದ್ದು, ಸ‌್ಥಳೀಯ ಎಸ್.ಐ ನಂದಕುಮಾರ್’ರಿಗೆ ವಿಷಯ ತಿಳಿಸಿದ್ದರು, ವಿಷಯ ತಿಳಿದು ನಿನ್ನೆ ಸ್ಥಳಕ್ಕೆ ಬೇಟಿ ನೀಡಿದ ಉಪ್ಪಿನಂಗಡಿ ಸಬ್’ಇನ್ಸ್’ಪೆಕ್ಟರ್ ನಂದಕುಮಾರ್ ಊರವರಿಗೆ ಬರವಸೆ ನೀಡಿ ಸುಲೈಮಾನ್’ರವರನ್ನು ಗೃಹಬಂದನದಿಂದ ಮುಕ್ತಗೊಳಿಸಿ, ತನ್ನ ಸ್ವಂತಮನೆಯಲ್ಲಿ ಆಶ್ರಯ ನೀಡಿ,ಊಟ ಉಪಚಾರ ನೀಡಿ, ಮಾನವಿಯತೆ ಮೆರೆದು ಉಪ್ಪಿನಂಗಡಿ ಜನತೆಯ ಮನೆಮಾತಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್.ಐ ನಂದಕುಮಾರ್’ರ ಈ ಕಾರ್ಯವನ್ನು ಸಹಿಸದ ಸೊಸೆ ಹಾಗು ಮಗ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮರು ಆರೋಪಿದ್ದಾರೆ, ಆದರೆ ಎಲ್ಲವನ್ನೂ ಅರಿತಿರುವ ನಾಗರಿಕಗರು ಎಸ್.ಐಯವರ ಕಾರ್ಯವನ್ನು ಶ್ಲಾಕಿಸಿದ್ದು, ಇಂತಹ ನಿಷ್ಠಾವಂತ, ಜನತೆಯ ಕಷ್ಠಕಾರ್ಯಗಳಿಗೆ ಸ್ಪಂದಿಸುವಂತಹ ಅಧಿಕಾರಿಗಳು ಸಮಾಜಕ್ಕೆ ಅತೀ ಅಗತ್ಯವಿದ್ದು. ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಾಹೀರಾತು