ಕಲ್ಲಡ್ಕ : ಗುರು ಎಂದರೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ ಕೈ ಹಿಡಿದು sಸರಿಯಾದ ಕಡೆಗೆ ಕೊಂಡೊಯ್ಯುವ ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿನ ಆತ್ಮವನ್ನು ಜಾಗ್ರತೆ ಗೊಳಿಸುವ ಸರಿದಾರಿಯಲ್ಲಿ ನಡೆಸಿ ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ ಗುರು ಆತನು ತನ್ನ ವೃತ್ತಿ ಜೀವನದಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾದಾನ ಮಾಡಿದರು ಯಾವುದೇ ಫಲಾಪೇಕ್ಷೆ ಬಳಸೋದಿಲ್ಲ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸುವುದರ ಲ್ಲಿಯೇ ತೃಪ್ತಿ ಕಾಣುವ ಗುರುವಿಗೆ ಗುರುವಂದನೆ ಸಲ್ಲಿಸುವುದು ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ ಅಧ್ಯಕ್ಷ ರಾದ ಶ್ರೀಯುತ ಉಮಾನಾಥ ರೈ ಮೇರಾವು ವೀರಕಂಭದಲ್ಲಿ ನಡೆದ “ಗುರುವಂದನಾ” ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಗೂ ವೃತ್ತಿ ಯಿಂದ ನಿವೃತ್ತಿ ಹೊಂದಿದ ಮಜಿ ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿ ಎಸ್ ಕೆ ಯವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾದ ಶ್ರೀಯುತ ಶಿವಪ್ರಸಾದ್ ರವರು ಏನೂ ತಿಳಿಯದ ಒಂದು ಸಾಮಾನ್ಯನನ್ನು ಜೀವನದ ಮೌಲ್ಯ ದ ಮೂಲಕ ಗುರಿ ಸಾಧನೆಗೆ ಮಾರ್ಗ ತೋರುವವನೇ ಗುರು, ಶಿಕ್ಷಣದ ಯಜ್ಞದ ಸ್ವತ್ತು ಗುರು ತಾನು ಉರಿದು ವಿದ್ಯಾರ್ಥಿ ಗಳ ಮೂಲಕ ಜಗತ್ತಿಗೆ ಬೆಳಕು ನೀಡುವ ಗುರುವಿಗೆ ಎಷ್ಟು ನಮಿಸಿದರೂ ಸಾಲದು ಎಂದು ತಿಳಿಸಿದರು.
ಒಂದು ಸಂಸ್ಥೆಯ ಮುಖ್ಯ ಶಿಕ್ಷಕ ತನ್ನ ಜೊತೆಗೆ ಇತರ ಸಂಘಟನೆಗಳು ಹಿರಿಯ ವಿದ್ಯಾರ್ಥಿ ಗಳ ಬಳಗದ ಸಹಕಾರ ಪಡೆದು ಸಂಸ್ಥೆ ಯು ಭೌತಿಕ ಅಭಿವೃದ್ಧಿಗೆ ಕಾರಣರಾಗುತ್ತಾರೆ, ಈ ರೀತಿಯಾಗಿ ಮಜಿ ಶಾಲೆಯು ಸುಂದರ ಕಟ್ಟಡವನ್ನು ಹೊಂದಲು ಸಾಧ್ಯವಾಯಿತು, ನಿನ್ನ ಕರ್ಮ ವನ್ನು ಒಳ್ಳೆಯ ಮನಸ್ಸಿನಿಂದ ನೀನು ಮಾಡು ಫಲಾಪೇಕ್ಷೆ ಯನ್ನು ಮಾಡದಿರು ಆಗ ಉತ್ತಮ ಫಲ ಖಂಡಿತಾ ಸಿಗಲಿದೆ ಎಂದು ನಿವೃತ್ತ ಶಿಕ್ಷಕ ಶ್ರೀಯುತ ನಾರಾಯಣ ಗೌಡ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತನ್ನ 30 ವರ್ಷಗಳ ಸೇವೆ ಹಾಗೂ ಮಜಿ ಶಾಲೆಯ ಮುಖ್ಯ ಶಿಕ್ಷಕ ನಾಗಿ ಎಂಟು ವರುಷಗಳ ಸೇವೆಯನ್ನು ಸ್ಮರಿಸಿ ತನಗೆ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿ, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಶಾಲಾ ಸಹಶಿಕ್ಷಕರು, ಅಡುಗೆ ಸಿಬ್ಬಂದಿ, ಶಾಲಾ ವಾಹನ ಚಾಲಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಶಾಲೆಗೆ 5 ಮರದ ಕುರ್ಚಿಗಳನ್ನು, ಹಾಗೂ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ಸಿಲ್ ಬಾಕ್ಸ್ ಗಳನ್ನು ಕೊಡುಗೆಯಾಗಿ ನೀಡಲಾಯಿತು
ಕಾರ್ಯಕ್ರಮದಲ್ಲಿ ನಿವೃತ್ತಿ ಕೊಳ್ಳುತ್ತಿರುವ ಮುಖ್ಯ ಶಿಕ್ಷಕರನ್ನು ಶಾಲಾವತಿಯಿಂದ, ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ವತಿಯಿಂದ, ಗ್ರಾಮಪಂಚಾಯತ್ ವೀರಕಂಭ ವತಿಯಿಂದ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾದ ದಿನೇಶ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಶಾಲಾಸ್ಥಳ ದಾನಿಗಳಾದ ತಿರುಮಲ ಕುಮಾರ್ ಮಜಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್, ಜಯಪ್ರಸಾದ್, ಸಂದೀಪ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀಯುತ ಫ್ರಾನ್ಸಿಸ್ ಡೇಸಾ, ವೀರಕಂಬ ಪಂಚಾಯತ್ ಕಾಯ9ನಿವಾ9ಹಣಾ ಅಧಿಕಾರಿ ನಿಶಾಂತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಹಿರಿಯ ವಿದ್ಯಾರ್ಥಿ ಈಶ್ವರ್ ಭಟ್ ರಾಯ್ಕೋಡಿ,ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಪುಟ್ಟರಂಗನಾಥ್, ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಹಾಗೂ ಎನ್.ಪಿ.ಯಸ್. ಸಂಘದ ಅಧ್ಯಕ್ಷ ಶ್ರೀಯುತ ಸಂತೋಷ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಶ್ರೀಯುತ ಯತೀಶ್, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಯುತ ರಾಘವೇಂದ್ರ ಬಲ್ಲಾಳ್, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.