Thursday, January 23, 2025
ಸುದ್ದಿ

ಕುಡಿಯುವ ನೀರಿನ ಟ್ಯಾಂಕ್‌ಗೆ ಮಂಗಗಳು ಬಿದ್ದು ಸಾವು : ಅದೇ ನೀರನ್ನು ಕುಡಿದು ಗ್ರಾಮದ ಜನತೆ ಅಸ್ವಸ್ಥ – ಕಹಳೆ ನ್ಯೂಸ್

ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಂಗಗಳು ಬಿದ್ದು ಸಾವನ್ನಪ್ಪಿದ್ದು, ಅದೇ ನೀರನ್ನು ಕುಡಿದು ಗ್ರಾಮದ ಕೆಲವರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಖಾನಾಪೂರದಲ್ಲಿ ನಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಗಳು ಸತ್ತು ಬಿದ್ದ ಟ್ಯಾಂಕ್‌ನಿoದಲೇ ಇಡೀ ಊರಿಗೆ ನೀರು ಸರಬರಾಜು ಆಗುತ್ತಿತ್ತು. ತೆರೆದ ವಾಟರ್ ಟ್ಯಾಂಕ್ ಆದ್ದರಿಂದ ಮಂಗಗಳು ನೀರು ಕುಡಿಯಲು ಹೋಗಿ ಬಿದ್ದಿದ್ದಾವೆ. ನಂತರ ಮೇಲೆ ಬರಲಾಗದೇ ಅದೇ ನೀರಲ್ಲೇ ಎರಡು ಮಂಗಗಳು ಮುಳುಗಿ ಸಾವನ್ನಪ್ಪಿದ್ದಾವೆ.

ಮಂಗಗಳು ಸತ್ತು ಮೂರು ದಿನಗಳ ಕಾಲ ಇದೇ ನೀರನ್ನು ಗ್ರಾಮಸ್ಥರು ಸೇವಿಸಿದ್ದು, ಅವರಲ್ಲಿ ಕೆಲವರು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನೀರಿನ ಟ್ಯಾಂಕ್ ಮುಚ್ಚಲು ಯಾವುದೇ ಕ್ರಮವಹಿಸದ ಯಮನಾಳ ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಸಿಬ್ಬಂದಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.