Thursday, January 23, 2025
ಸುದ್ದಿ

ಗಂಡನಿಗೆ ಅನೈತಿಕ ಸಂಬoಧ : ಮನನೊಂದ ಪತ್ನಿ ಆತ್ಮಹತ್ಯೆ -ಕಹಳೆ ನ್ಯೂಸ್

ಗಂಡನ ಅನೈತಿಕ ಸಂಬಂಧದಿಂದ ಮನನೊಂದ ಪತ್ನಿ ಆತನ ಗರ್ಲ್ ಫ್ರೇಂಡ್ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಮಹಿಳೆಯನ್ನು ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಅವರು ಮೊದಲ ಪತಿಗೆ ವಿಚ್ಛೇದನ ನೀಡಿ, ಚೇತನ್ ಗೌಡರನ್ನು ಎರಡನೇ ಮದುವೆಯಾಗಿದ್ದರು. ಚೇತನ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯೊಂದರಲ್ಲಿಯೇ ಪವಿತ್ರಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಚೇತನ್ ಇತ್ತೀಚೆಗೆ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಪತಿ-ಪತ್ನಿ ನಡುವೆ ಜಗಳವಾಗಿತ್ತು. ಈ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಅವರ ಜೊತೆ ತಿಳಿಸಿದ್ದರು. ಬಳಿಕ ಪವಿತ್ರಾ ಮನನೊಂದು ವಾಟ್ಸಾಪ್ ಸ್ಟೇಟಸ್ ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗಳ ವಾಟ್ಸಾಪ್ ಸ್ಟೇಟಸ್ ನೋಡಿದ ತಾಯಿ ಆಕೆಯ ಮನೆಗೆ ಓಡಿ ಬಂದಾಗ ಅಷ್ಟರಲ್ಲಿ ಅವರು ಸಾವನ್ನಪ್ಪಿರುವುದಾಗಿ ಬೆಳಕಿಗೆ ಬಂದಿದೆ. ಮೃತಳ ತಾಯಿ ಪದ್ಮಮ್ಮ ಅವರು ಠಾಣೆಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 306 ಅಡಿ ದೂರು ದಾಖಲಾಗಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೋರ್ವ ಯುವತಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಎರಡು ಪೋನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಜುಲೈ.2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.