Recent Posts

Sunday, November 10, 2024
ಸುದ್ದಿ

ವೈಯಕ್ತಿಕ ಘನತೆಯನ್ನು ಹೆಚ್ಚಿಸಲು ಎನ್‍ಎಸ್‍ಎಸ್ ಸಹಕಾರಿ: ಪ್ರೊ.ರಾಧಾಕೃಷ್ಣ

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ಸಮಜಮುಖಿ ಚಿಂತನೆಯೊಂದಿಗೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಯುವಜನತೆಯು ತಮ್ಮಲಿರುವ ಶ್ರಮಬದ್ಧತೆ ಹಾಗು ಸೇವಾ ಮನೋಭಾವವನ್ನು ವಿದ್ಯಾರ್ಥಿ ದೆಸೆಯಲ್ಲೆ ಗುರುತಿಸಿಕೊಳ್ಳಲು ಈ ಯೋಜನೆಯು ಸಹಕಾರಿ ಎಂದು ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕ ಪ್ರೊ.ರಾಧಕೃಷ್ಣ ಗೌಡ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಆಯೋಜನೆಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ದಿನದ ಆಚರಣೆಯಲ್ಲಿ ಅತಿಥಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನದಲ್ಲಿ ಎದುರಾಗುವ ನೋವುಗಳು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಅದನ್ನು ಮೆಟ್ಟಿ ನಿಂತು ಒಳ್ಳೆಯ ಬಾಳ್ವೆ ನಡೆಸಲು ಸೇವಾ ಯೋಜನೆಯು ಸಹಕಾರಿಯಾಗುತ್ತದೆ. ಅದೇ ರೀತಿ ಈ ಯೋಜನೆಯ ಧ್ವಜವು ಶ್ರಮ, ರಕ್ಷಣೆ ಮತ್ತು ಶಾಂತಿಯ ಸಂಕೇತ.ಇಂತಹ ಒಂದು ಯೋಜನೆಯ ಅಡಿಯಲ್ಲಿ ಸೇವೆ ಮಾಡುವ ಪ್ರತಿಯೊಬ್ಬರಿಗೂ ಆತ್ಮ ಸಂತೋಷ, ಋಣ ವಿಮೋಚನೆ ಮತ್ತು ಸಮಾಜದಲ್ಲಿ ಗೌರವ ತನ್ನಿಂದ ತಾನಾಗಿ ದೊರಕುತ್ತದೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ವೃತ್ತಿ ಬದುಕಿಗೆ ಅದು ಸಹಕಾರಿಯಗುತ್ತದೆ ಹಾಗು ಶ್ರಮದ ಬದುಕಿಗೆ ಮತ್ತು ಜೀವನದ ಸರ್ವತೋಮುಖ ಬೆಳೆವಣಿಗೆಗೆ ಕಾರಣೀಭೂತವಾಗುತ್ತದೆ. ಅದೇ ರೀತಿ ಸೇವೆಯಲ್ಲಿ ದೊರಕುವ ಆನಂದ ದೀರ್ಘಕಾಲ ನೆನಪಿನಂಗಳದಲ್ಲಿ ಅಚ್ಚಳಿಯಾಗಿ ಉಳಿಯುತ್ತದೆಎಂದರಲ್ಲದೇ ಕ್ಷಣಿಕ ಸುಖಗಳಿಗೆ ಬಲಿಯಾಗಬಾರದು.ಜೀವನದಲ್ಲಿ ಎಷ್ಟೆ ಕಷ್ಟಗಳು ಎದುರಾದರು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸೇವಾ ಯೋಜನಾಧಿಕಾರಿಗಳಲ್ಲೊಬ್ಬರಾದ ಅನಿತಾ ಕಾಮತ್ ಉಪಸ್ಥಿರಿದ್ದರು. ಯೋಜನಾಧಿಕಾರಿ ಶ್ರೀನಾಥ್ ಸ್ವಾಗತಿಸಿ, ಎನ್ ಎಸ್ ಎಸ್ ಘಟಕ ನಾಯಕ ನವನೀತ್ ವಂದಿಸಿದರು. ವಿದ್ಯಾರ್ಥಿನಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು.