Thursday, January 23, 2025
ಸುದ್ದಿ

ನಟ ಉಪೇಂದ್ರ ಮನೆಗೆ ಭೇಟಿ ನೀಡಿದ ಶ್ರೀಪಲಿಮಾರು ಮಠದ ಶ್ರೀಗಳು –ಕಹಳೆ ನ್ಯೂಸ್

ಶ್ರೀಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀವಿದ್ಯಾಧೀಶ ತೀರ್ಥರು ಚಿತ್ರನಟ ಉಪೇಂದ್ರ ಅವರ ಮನೆಗೆ ತಮ್ಮ ಶಿಷ್ಯವೃಂದದೊಂದಿಗೆ ಭೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ಉಪೇಂದ್ರರವರು ಶ್ರೀಗಳನ್ನು ಆಹ್ವಾನಿಸಿದ್ದು, ತಮ್ಮ ಮನೆಗೆ ಬರುವಂತೆ ಕೇಳಿದ್ದಾರೆ. ಇದಕ್ಕೆ ಮನ್ನಿಸಿದ ಶ್ರೀಗಳು ಅವರ ಮನೆಗೆ ಆಗಮಿಸಿದ್ದು, ನಟ ಉಪೇಂದ್ರರವರ ಆಧ್ಯಾತ್ಮದ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ.

ಇನ್ನೂ ಇದೇ ವೇಳೆ ಪಲಿಮಾರಿನ ಶ್ರೀಗಳು ಉಪೇಂದ್ರ ಅವರನ್ನು ರಜತಪೀಠಪುರಕ್ಕೆ ಹಾಗೂ ಪಲಿಮಾರಿನ ಮೂಲ ಮಠಕ್ಕೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಮಠದ PRO ಕಡೆಕಾರು ಶ್ರೀಶ ಭಟ್, ಗಿರೀಶ್ ಉಪಾಧ್ಯಯ, ಶ್ರೀನಿವಾಸ ಭಟ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.