Friday, January 24, 2025
ಸುದ್ದಿ

ಸೇಫ್ ಝೋನ್‌ನತ್ತ ಕಾಲಿಡುತ್ತಿದೆ ಬೀಳುವ ಸ್ಧಿತಿಯಲ್ಲಿದ್ದ ಗಡಿಯಾರ ಶಾಲೆ – ಕಹಳೆ ನ್ಯೂಸ್

ಬಂಟ್ವಾಳ: ರಸ್ತೆ ಕಾಮಗಾರಿಗಾಗಿ ಅಗೆದ ಪರಿಣಾಮವಾಗಿ ಬೀಳುವ ಹಂತದಲ್ಲಿದ್ದ ಶಾಲೆ ಹಾಗೂ ವಿದ್ಯುತ್ ಟವರ್ ಇದೀಗ್ ಸೇಫ್ ಝೋನ್‌ನತ್ತ ಕಾಲಿಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಸಿರೋಡು – ಅಡ್ಡಹೊಳೆವರೆಗಿನ ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಅಗೆದಿದ್ದು, ಇದೀಗ ಭಾರಿ ಮಳೆಯ ಹಿನ್ನಲೆಯಲ್ಲಿ ಗುಡ್ಡ ಕುಸಿದು, ಬಂಟ್ವಾಳ ತಾಲೂಕಿನ ಗಡಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮೀಪವೇ ಇರುವ ವಿದ್ಯುತ್ ಟವರ್ ಬೀಳುವ ಸ್ಧಿತಿಯಲ್ಲಿತ್ತು.
ಈ ಬಗ್ಗೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಕೆ.ಎನ್.ಆರ್.ಸಿ.ಕಂಪೆನಿಯ ಪ್ರಮುಖರು, ಅಧಿಕಾರಿಗಳು, ಶಾಲಾಭಿವೃದ್ದಿ ಸಮಿತಿ ಮತ್ತು ಗ್ರಾಮಸ್ಥರ ಜೊತೆಯಲ್ಲಿ ತುರ್ತು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾಡಿದ ನಿರ್ಣಯದಂತೆ ಜುಲೈ 8ರಿಂದ ಅಂದರೆ ಇಂದಿನಿಂದಲೇ ಕಾಮಗಾರಿ ಆರಂಭಿಸಿ ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ತಡೆಗೋಡೆ ಕಾಮಗಾರಿ ಆರಂಭವಾಗಿದ್ದು, ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.