Friday, January 24, 2025
ಸುದ್ದಿ

ಖಾಸಗಿ ವೀಡಿಯೋ ವೈರಲ್ : ಆರೋಪಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು – ಕಹಳೆ ನ್ಯೂಸ್

ಮೂಡುಬಿದಿರೆ : ಖಾಸಗಿ ವೀಡಿಯೋ ವೈರಲ್ ಮಾಡಿರುವ ಆರೋಪದಡಿ ಮಿಜಾರು ಶಾಂತಿಗಿರಿ ನಿವಾಸಿ ಜಯ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಗೆ ಸಂಬoಧಿಸಿದoತೆ ಬಗ್ಗಜಾಲು ಸುವರ್ಣನಗರದ ನಿವಾಸಿ ಸುಮಂತ್ ಅಂಚನ್ ತನ್ನ ಕುಟುಂಬದ ಸದಸ್ಯರೋರ್ವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದಕ್ಕೆ ಮನನೊಂದು ಸೋಮವಾರ ರಾತ್ರಿ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ವೀಡಿಯೋ ಯಾರ ಮೊಬೈಲ್‌ನಿಂದ ಸೋರಿಕೆ ಯಾಗಿದೆ ಎಂದು ಮೂಡುಬಿದಿರೆ ಪೊಲೀಸರು ತನಿಖೆ ನಡೆಸಿದಾಗ
ಜಯ ಮೊಬೈಲ್‌ನಿಂದ ಸೋರಿಕೆಯಾಗಿರುವುದು ತಿಳಿದು ಬಂದಿದೆ. ತಕ್ಷಣ ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.