Thursday, January 23, 2025
ಸುದ್ದಿ

ವಿಟ್ಲದಲ್ಲಿ ಭಾರಿ ಮಳೆಯಿಂದಾಗಿ ಕಾಂಪೌoಡ್ ಕುಸಿತ, ಮನೆಗೆ ಹಾನಿ – ಕಹಳೆ ನ್ಯೂಸ್

ವಿಟ್ಲ : ಭಾರಿ ಮಳೆಯಿಂದಾಗಿ ಕಾಂಪೌoಡ್ ಮನೆ ಗೋಡೆಯ ಮೇಲೆ ಕುಸಿದು ಬಿದ್ದು, ಅಪಾರ ನಷ್ಟ ಉಂಟಾದ ಘಟನೆ ವಿಟ್ಲ ಸಮೀಪದ ಚಂದಳಿಕೆ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದಳಿಕೆ ನಿವಾಸಿ ಕೃಷ್ಣಪ್ಪ ಮಡಿವಾಳ ರವರ ಮನೆಗೆ ಕಾಂಪೌAಡ್ ಕುಸಿದು ಬಿದ್ದಿದ್ದು, ಕೂಡಲೇ ಅವರು ವಿಟ್ಲ ಪಟ್ಟಣ ಪಂಚಾಯತ್ ವಿಕೋಪ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪ್ರಾಕೃತಿಕ ವಿಕೋಪ ಸಹಾಯವಾಣಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್ ವಿ.ಕೆ. ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಲು ಮನವಿ:
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಯಾವುದೇ ಅಪಾಯ ಸಂಭವಿಸಿದ ಸಂದರ್ಭದಲ್ಲಿ ಕೂಡಲೇ ವಿಟ್ಲ ಪಟ್ಟಣ ಪಂಚಾಯತ್ ಪ್ರಾಕೃತಿಕ ವಿಕೋಪ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08255239220 ಯನ್ನು ಸಂಪರ್ಕಿಸುವAತೆ ಪಟ್ಟಣ ಪಂಚಾಯತ್ ತಿಳಿಸಿದೆ.