Thursday, January 23, 2025
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 83 ಕಡೆಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಸಂಪನ್ನ ! –ಕಹಳೆ ನ್ಯೂಸ್

ಗುರುಪೂರ್ಣಿಮೆಯ ನಿಮಿತ್ತ ಹಿಂದೂ ರಾಷ್ಟ ಸ್ಥಾಪನೆಯ ಕಾರ್ಯ ಮಾಡಲು ದೃಢ ನಿಶ್ಚಯ ಮಾಡಿರಿ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜ್, ಕೊಡಿಯಾಲ್‌ಬೈಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತಾನಾಡಿ, ಹೇಗೆ ರಾತ್ರಿ ಕಳೆದ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ ಕಾಲಮಹಿಮೆಗನುಸಾರ ಆಗಲಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟçದ ಸ್ಥಾಪನೆಯನ್ನೂ ಯಾರೂ ತಡೆಯಲು ಸಾಧ್ಯವಿಲ್ಲ. ಅದೇ ರೀತಿ `ಹಿಂದೂ ರಾಷ್ಟç ಬಂದೇ ಬರಲಿದೆ’ ಇದು ಕಲ್ಲಿನ ಮೇಲೆ ಕೊರೆದ ವಾಕ್ಯವಾಗಿದೆ. ಅನೇಕ ಸಂತರು ಸಹ ಇದರ ಬಗ್ಗೆ ಹೇಳಿದ್ದು ಕಾಲವೂ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ.

ದೇಶಾದ್ಯಂತ 83 ಕಡೆಗಳಲ್ಲಿ ಮತ್ತು ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ 28 ಕಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ `ಗುರುಪೂರ್ಣಿಮಾ ಮಹೋತ್ಸವ’ ವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು ಎಂದು ಹೇಳಿದ್ದಾರೆ.

ಇನ್ನೂ ಇದೇ ವೇಳೆ ಕೊಡಗಿನ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರೂ ಹಾಗೂ ನ್ಯಾಯವಾದಿಗಳಾದ ಕೃಷ್ಣಮೂರ್ತಿ ಮಾತಾನಾಡಿ, ಹಿಂದುತ್ವದ ಕಾರ್ಯ ಅಂದರೆ ಧರ್ಮಕಾರ್ಯ ಮಾಡುವ ಪ್ರತಿಯೊಬ್ಬರ ಮೇಲೆ ನಿಶ್ಚಿತವಾಗಿ ಗುರುಕೃಪೆಯಾಗುತ್ತದೆ. ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸುತ್ತಾ ಗುರು ಪರಂಪರೆಯು ಸನಾತನ ಧರ್ಮವು ಭಾರತ ಮಾತೆಗೆ ನೀಡಿದ ಕೊಡುಗೆಯಾಗಿದೆ. ಗುರುಗಳು ಮೋಕ್ಷಪ್ರಾಪ್ತಿಗಾಗಿ ದಾರಿ ತೋರಿಸುತ್ತಾರೆ. ಅವರು ಶಿಷ್ಯನ ಮೇಲೆ ತೋರುವ ಕೃಪೆಗೆ ಶುಲ್ಕವಿರುವುದಿಲ್ಲ. ಇವತ್ತಿನ ಸಮಾಜ ಗುರುಶಿಷ್ಯ ಪರಂಪರೆಯನ್ನು ಮರೆತಿರುವುದರಿಂದ ಅಧರ್ಮದ ಮಾರ್ಗದಲ್ಲಿ ಸಾಗುತ್ತಿದೆ. ಹಾಗಾಗಿ ನಾವೆಲ್ಲರೂ ಗುರುಗಳ ಮಾರ್ಗದರ್ಶನ ಪಡೆದು ಭಗವದ್ಭಕ್ತರಾಗಿ ಹಿಂದೂ ರಾಷ್ಟç ಸ್ಥಾಪನೆಯ ಸಂಕಲ್ಪ ಮಾಡಬೇಕಾಗಿದೆ ಎಂದಿದ್ದಾರೆ.