ಪುಣೆ : ಇತ್ತೀಚಿನ ದಿನಗಳಲ್ಲಿ ವಿಮಾನಗಳ ಮೂಲಕ ಚಿನ್ನ ಹಾಗೂ ಇತರ ಬೆಲೆ ಬಾಳೋ ವಸ್ತುಗಳನ್ನು ಸಾಗಿಸುವಾಗ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬೀಳುವಂತಹ ಪ್ರಸಂಗಗಳು, ಪ್ರಕರಣಗಳು ಯತೇಚ್ಛವಾಗಿವೆ. ಅವರು ಚಿನ್ನಾಭರಣ ಸಾಗಿಸಲು ಮಾಡುವ ಕತರ್ನಾಕ್ ಐಡಿಯಾಗಳು ಎಂತವರನ್ನೂ ಬೆರಗಾಗಿಸುತ್ತದೆ. ಆದರೆ ಇಲ್ಲೊಂದು ಎರ್ಪೋರ್ಟ್ ಅಲ್ಲಿ ಮಹಿಳೆಯೊಬ್ಬಳು ಚಿನ್ನವನ್ನು ಸಾಗಿಸಲು ಮಾಡಿರುವ ಪ್ಲಾನ್ ಮಾಡಿದ್ರೆ ನೀವೂ ಹೌಹಾರುತ್ತೀರಾ !!
ಅಂದಹಾಗೆ ದುಬೈನಿಂದ ಬಂದ ವಿಮಾನದಲ್ಲಿ ಪುಣೆಗೆ ಬಂದಿಳಿದ 41 ವರ್ಷದ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಓಡಾಡುತ್ತಿದ್ದುದ್ದನ್ನು ಕಸ್ಟಮ್ಸ್ ಅಧಿಕಾರಿಗಳು ಮೊದಲಿಗೆ ಗಮನಿಸಿದ್ದಾರೆ. ಆಗ ಕೂಡಲೇ ಜಾಗರೂಕರಾದ ಅಧಿಕಾರಿಗಳ ತಂಡ ಮಹಿಳಾ ಸಿಬ್ಬಂದಿಯನ್ನು ಕರೆಸಿ, ತಪಾಸಣೆ ನಡೆಸಿದಾಗ ಆಕೆ ತನ್ನ ಖಾಸಗಿ ಅಂಗದಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ ರೇ ಮಾಡಿಸಿದಾಗ 20.30 ಲಕ್ಷ ರೂಪಾಯಿ ಮೌಲ್ಯದ 423.41 ಗ್ರಾಂ ಚಿನ್ನವನ್ನು ಕ್ಯಾಪ್ಯ್ಸೂಲ್ ರೂಪದಲ್ಲಿ ತನ್ನ ಖಾಸಗಿ ಅಂಗದಲ್ಲಿ ಇರಿಸಿಕೊಂಡು ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ಎಲ್ಲರನ್ನೂ ದಂಗುಬಡಿಸಿದೆ. ಸದ್ಯ ಪ್ರಕರಣ ಸಂಬಂಧ ಮಹಿಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.