Sunday, November 24, 2024
ಪುತ್ತೂರುಸುದ್ದಿ

ಕೊಂಬೆಟ್ಟು ಪ್ರೌಡ ಶಾಲೆ ಪಕ್ಕದಲ್ಲಿ ಮಣ್ಣು ಕುಸಿತ ; ಅಧಿಕಾರಿಗಳಿಂದ ಪರಿಶೀಲನೆ – ಕಹಳೆ ನ್ಯೂಸ್

ಪುತ್ತೂರು: ಭಾರೀ ಮಳೆಯ ಪರಿಣಾಮ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಿಣ ಪಾಶ್ರ್ವದಲ್ಲಿರುವ ತಾಲೂಕು ಕ್ರೀಡಾಂಗಣದ ಬಳಿಯ ಮಣ್ಣು ಕುಸಿತ ಉಂಟಾಗಿದೆ. ಇದರಿಂದಾಗಿ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ನೂತನ ಶೌಚಾಲಯ ಕಟ್ಟಡಕ್ಕೆ ಅಪಾಯ ಎದುರಾಗಿದೆ.

ತಾಲೂಕು ಕ್ರೀಡಾಂಗಣದ ಮೈದಾನದ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮವಾಗಿ ಈ ಭಾಗದಲ್ಲಿ ಪದೇ ಪದೇ ಮಣ್ಣು ಕುಸಿತ ಆಗುತ್ತಿದೆ. ಮಣ್ಣು ಕುಸಿತದಿಂದಾಗಿ ಈಗಾಗಲೇ ಶಾಲೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಿರ್ಮಾಣಗೊಂಡ ಕಟ್ಟಡ ಬಿರುಕು ಬಿಟ್ಟಿದ್ದು ಅದನ್ನು ತೆರವು ಮಾಡಲು ಲೋಕೋಪಯೋಗಿ ಇಲಾಖೆ ಅದೇಶ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕ್ರೀಡಾಂಗಣದ ದಕ್ಷಿಣ ಭಾಗದಲ್ಲಿ ಭಾರೀ ಮಳೆಗೆ ಮತ್ತೆ ಮಣ್ಣು ಕುಸಿತವಾಗಿದ್ದು, ಹಳೆಯ ಶೌಚಾಲಯದ ಅಡಿಗಲ್ಲು ಕಾಣುವಂತಾಗಿದೆ. ಇದರ ಪಕ್ಕದಲ್ಲಿರುವ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿರ್ಮಾಣಗೊಂಡಿರುವ ನೂತನ ಪುರುಷರ ಶೌಚಾಲಯ ಕಟ್ಟಡಕ್ಕೆ ಅಪಾಯ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು