ಪುತ್ತೂರು : ಭಾರಿ ಮಳೆಯಿಂದಾಗಿ ಮರ ಬಿದ್ದು ಹಾನಿಗೊಳಗಾಗಿದ್ದ ಮನೆಯನ್ನು ಶಾಸಕರಾದ ಅಶೋಕ್ ರೈ ಅಭಿಮಾನಿ ಬಳಗದವರು ದುರಸ್ಥಿ ಕಾರ್ಯವನ್ನು ಮಾಡಿಸಿದ್ದಾರೆ.
ಮುಂಡೂರು ಸಮೀಪದ ಮಲ್ಲು ಎಂಬುವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಮುರಿದು ಬಿದ್ದ ಪರಿಣಾಮ ಮನೆ ಮೇಲೆ ಅಳವಡಿದ್ದ ಸಿಮೆಂಟ್ ಶೀಟ್ಗಳು ಹಾಗೂ ಮನೆ ಸಂಪೂರ್ಣ ಜಖಂಗೊoಡಿತ್ತು. ಮನೆ ವಾಸ್ತವ್ಯಕ್ಕೆ ಯೋಗ್ಯವಾಗಿರಲಿಲ. ಘಟನಾ ಸ್ಥಳಕ್ಕೆ ಅಶೋಕ್ ರೈ ಅಭಿಮಾನಿ ಬಳಗ ಬಂದು ರಾತ್ರೋ ರಾತ್ರಿ ಮರನ್ನು ತೆರವು ಮಾಡಿದ ಬಳಿಕ ಮನೆಯನ್ನು ದುರಸ್ಥಿಗೊಳಿಸಿದರು.
ಘಟನಾ ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಶಿವಶಂಕರ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಳೆಗೆ ಮನೆ ಹಾನಿಯಾದರೆ ತಕ್ಷಣ ಮನೆಯನ್ನು ದುರಸ್ಥಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದ್ದು, ಅದರಂತೆ ಅಭಿಮಾನಿ ಬಳಗದವರು ಮನೆಯನ್ನು ದುರಸ್ಥಿಗೊಳಿಸಿದ್ದಾರೆ.
ಸಿಂಹವನ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ದೇವರಾಜ, ಆನಂದ ಸಿಂಹವನ, ಶಿವು ಸಿಂಹವನ, ರವಿ, ಪುಟ್ಟಪ್ಪ ನಾಯ್ಕ, ಸುಂದರ ನಾಯ್ಕ ಮತ್ತಿತರರು ಮನೆ ದುರಸ್ಥಿ ಮಾಡುವಲ್ಲಿ ನೆರವಾದರು.